ಪ್ರಸ್ತುತ ಹೊರ ವರ್ತುಲ ರಸ್ತೆಯ ಮೇಲ್ದರ್ಜೆಗೆ 420 ಕೋಟಿ ರೂ. ಸೇರಿ 2,671 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಪೈಕಿ ವಾರ್ಡ್ ರಸ್ತೆಗಳನ್ನು 1,000 ಕೋಟಿ ರೂ. (82 ಪ್ಯಾಕೇಜ್) ಹಾಗೂ ರಾಜ್ಯ ಸರ್ಕಾರದ ಅನುದಾನ ಅಡಿಯಲ್ಲಿ 1,241 ಕೋಟಿ ರೂ. (81 ಪ್ಯಾಕೇಜ್) ಒಳಗೊಂಡಿದೆ. ಇವುಗಳಲ್ಲಿ ಶೇ.80 ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾರ್ಯಾದೇಶ ನೀಡಿ ಏಪ್ರಿಲ್‌ನೊಳಗೆ ಕೆಲಸ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.