2014 ರ ಮುನ್ನ ನಿರ್ಮಿಸಿರುವ ಮನೆಗಳಿಗೂ ಇ ಖಾತಾ ನೀಡಿ: ಬಿಲ್ಡರ್ಸ್ ಅಸೋಸಿಯೇಶನ್ ಮನವಿ
2024 ಅಕ್ಟೋಬರ್ 1ಕ್ಕಿಂತ ಮೊದಲು ನಿರ್ಮಾಣಗೊಂಡ ಮನೆಗಳಿಗೆ ನಿವಾಸ ಅನುಮತಿ ಪತ್ರ (ಒಸಿ) ರಹಿತ ಅಪಾರ್ಟ್‌ಮೆಂಟ್‌ಗಳು ಹಾಗೂ ಬಡಾವಣೆಗಳಲ್ಲಿ ನಿರ್ಮಿತ ಮನೆಗಳಿಗೆ ಇ-ಖಾತಾ ಸೌಲಭ್ಯ ನೀಡುವಂತೆ ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಕೆ.ಆರ್.ಪುರ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 2024 ಅಕ್ಟೋಬರ್ 1ಕ್ಕಿಂತ ಮೊದಲು ನಿರ್ಮಾಣಗೊಂಡ ಮನೆಗಳಿಗೆ ನಿವಾಸ ಅನುಮತಿ ಪತ್ರ (ಒಸಿ) ರಹಿತ ಅಪಾರ್ಟ್‌ಮೆಂಟ್‌ಗಳು ಹಾಗೂ ಬಡಾವಣೆಗಳಲ್ಲಿ ನಿರ್ಮಿತ ಮನೆಗಳಿಗೆ ಇ-ಖಾತಾ ಸೌಲಭ್ಯ ನೀಡುವಂತೆ ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ, ನಗರ ಅಭಿವೃದ್ಧಿಯ ದೃಷ್ಟಿಯಿಂದ ಇವು ಅಗತ್ಯವೆಂಬುದನ್ನು ನಾವು ಅರಿತಿದ್ದೇವೆ. ಇ-ಖಾತಾ ಕಡ್ಡಾಯಗೊಳಿಸುವುದಕ್ಕೂ ಮೊದಲು ಸಮರ್ಪಕ ಮಾಹಿತಿಯ ಕೊರತೆಯಿಂದ ಅನೇಕ ಕಟ್ಟಡಗಳಿಗೆ ನಿವಾಸ ಅನುಮತಿ ಪತ್ರ ಇಲ್ಲದೆ ನಿರ್ಮಾಣಗೊಂಡಿವೆ. ಇದರ ಪರಿಣಾಮವಾಗಿ ಇಂತಹ ಯೋಜನೆಗಳಿಗೆ ಪ್ರಸ್ತುತ ಬಹು ಮಹಡಿ ನಿವೇಶನಗಳು ಇ-ಖಾತಾ ಹಾಗೂ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟಕರವಾಗಿದೆ. 2024 ಅಕ್ಟೋಬರ್ 1ಕ್ಕಿಂತ ಮೊದಲು ನಿರ್ಮಾಣಗೊಂಡ ನಿವಾಸ ಅನುಮತಿ ಪತ್ರ (ಒಸಿ) ರಹಿತ ಅಪಾರ್ಟ್‌ಮೆಂಟ್‌ಗಳು ಹಾಗೂ ಬಡಾವಣೆಗಳಲ್ಲಿ ನಿರ್ಮಿತವಾಗಿರುವ ಮನೆಗಳಿಗೆ ಇ-ಖಾತಾ ಸೌಲಭ್ಯ ನೀಡುವಂತೆ ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು.
ಪ್ರದಾನ ಕಾರ್ಯದರ್ಶಿ ಪ್ರಸಾದ್ ಲೆಕ್ಕಲಪುಡಿ, ಹಿಂದಿನ ನಿಯಮಗಳ ಅನುಷ್ಠಾನದಲ್ಲಿ ಸಡಿಲತೆ ಇದ್ದ ಕಾರಣದ ಹಿನ್ನೆಲೆಯಲ್ಲಿ ಅನೇಕ ನಿರ್ಮಾಣಕಾರರು ಸಾಲ ಪಡೆದು ಯೋಜನೆಗಳನ್ನು ಕೈಗೊಂಡಿದ್ದರು. ಆದರೆ,ಈಗ ಸರ್ಕಾರ ಏಕಾಏಕಿ ಕಠಿಣ ನಿಯಮಗಳನ್ನು ಕೈಗೊಂಡಿರುವುದರಿಂದ ಸಾವಿರಾರು ಸಣ್ಣ ಮತ್ತು ಮಧ್ಯಮ ನಿರ್ಮಾಣಕಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಿಂದ ಸರ್ಕಾರಕ್ಕೆ ತೆರಿಗೆ ಹಾಗೂ ಜಿಎಸ್ಟಿ ರೂಪದಲ್ಲಿ ಕೋಟ್ಯಂತರ ರೂಪಾಯಿಗಳ ಆದಾಯ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವುದನ್ನು ಪರಿಗಣಿಸಿ, ಈ ವಿಷಯವನ್ನು ಸಮತೋಲನದ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಕನ್ನಡಮಿತ್ರ ವೆಂಕಟಪ್ಪ, ಪ್ರದಾನ ಕಾರ್ಯದರ್ಶಿ ಪ್ರಸಾದ್ ಲೆಕ್ಕಲಪುಡಿ, ಕಾನೂನು ಸಲಹೆಗಾರರಾದ ಸುಬ್ರಹ್ಮಣ್ಯ, ರಾಮಚಂದ್ರಯ್ಯ, ಕೆ.ವಿ.ಆಂಜನೇಯಗೌಡ, ರಾಮಕೃಷ್ಣ, ಯಶವಂತ ಮತ್ತು ಗಂಗಾಧರ್ ಮತ್ತಿತರರಿದ್ದರು.