ಇನ್ನು ಯೋಜನೆಯ ಎರಡನೇ ಹಂತವಾದ ಕೆ.ಆರ್.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಸುಮಾರು 37 ಕಿಲೋಮೀಟರ್ ಉದ್ದದ ಮಾರ್ಗವು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬ್ಲೂ ಲೈನ್ ಪೂರ್ಣಗೊಂಡ ಬಳಿಕ ನಗರದ ಪೂರ್ವ ಭಾಗ ಹಾಗೂ ವಿಮಾನ ನಿಲ್ದಾಣ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದ್ದು, ಈ ಮಾರ್ಗದಲ್ಲಿನ ವಾಹನ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.