ರಾಜ್ಯದಲ್ಲಿ ಲಭ್ಯವಿರುವ ಕೃಷಿ ಸಾವಯವ ತ್ಯಾಜ್ಯದಿಂದ ಸಮರ್ಪಕವಾಗಿ ಮರುಬಳಕೆ ಮಾಡುವುದರಿಂದ ಒಟ್ಟು 4.21 ದಶಲಕ್ಷ ಟನ್ ಬಯೋಚಾರ್ ಉತ್ಪಾದಿಸಲು ಅವಕಾಶವಿದೆ. ಅಲ್ಲದೆ, ಪ್ರತಿ 300 ಕೆಜಿ ಬಯೋಚಾರ್‌ನಲ್ಲಿ ಶೇ.70 ಅಂದರೆ 210 ಕೆಜಿ ಇಂಗಾಲ, ಶೇ.1 (3 ಕೆಜಿ) ಸಾರಜನಕ, ಶೇ.0.3ರಷ್ಟು (0.9 ಕೆಜಿ) ರಂಜಕ ಹಾಗೂ ಶೇ.1.5 (4.5 ಕೆಜಿ) ಪೊಟ್ಯಾಷ್ ಅಂಶ ಅಡಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.