ಸಕಾರಾತ್ಮ ಬದಲಾವಣೆಗಾಗಿ ವ್ಯಸನ ಮುಕ್ತರಾಗಿ

ಬೆಂಗಳೂರು ನಗರದ ರಾಜರಾಜೇಶ್ವರಿ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಶೆಮುಕ್ತ ಭಾರತ ಸಂಕಲ್ಪ ಅಭಿಯಾನವನ್ನು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಉದ್ಘಾಟಿಸಿದರು.
ಬೆಂಗಳೂರು ನಗರದ ರಾಜರಾಜೇಶ್ವರಿ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಶೆಮುಕ್ತ ಭಾರತ ಸಂಕಲ್ಪ ಅಭಿಯಾನವನ್ನು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಉದ್ಘಾಟಿಸಿದರು.
Published on
ಬೆಂಗಳೂರು: ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಯುವಕರು ದೃಢ ಸಂಕಲ್ಪ ಮಾಡಬೇಕು. ಆ ಮೂಲಕ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಹೇಳಿದ್ದಾರೆ.
ನಗರದ ರಾಜರಾಜೇಶ್ವರಿ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯ ಎಸಿಎಸ್​ ಸಭಾಂಗಣದಲ್ಲಿ ದಿಶಾ ಬೋಧ್​ ಫೌಂಡೇಶನ್​ನ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಶೆಮುಕ್ತ ಭಾರತ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಕರು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಕಾಣಲು ಸಾಧ್ಯ. ಆರೋಗ್ಯಕರ ಮತ್ತು ಹೆಚ್ಚು ಜವಾಬ್ದಾರಿಯುತ ರಾಷ್ಟ್ರದ ರಾಯಭಾರಿಗಳಾಗುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಎಚ್ಚರಿಸಿದರು.
ವ್ಯಸನಮುಕ್ತ ಜೀವನವನ್ನು ನಡೆಸಿದಾಗ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು, ಸಮಾಜದ ಪ್ರತಿಯೊಬ್ಬ ನಾಗರಿಕರು ಸಹ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ರಾಜ್ಯಪಾಲರು ತಿಳಿಸಿದರು.
ರಾಷ್ಟ್ರೀಯ ಉಪಕ್ರಮಗಳನ್ನು ಬೆಂಬಲಿಸುವ ರಾಜರಾಜೇಶ್ವರಿ ಸಮೂಹ ಸಂಸ್ಥೆಗಳ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರನ್ನು ಪೋಷಿಸುವ ಪಾತ್ರವನ್ನು ಬಲಪಡಿಸುತ್ತದೆ. ಉತ್ತಮ ಭವಿಷ್ಯಕ್ಕಾಗಿ ಪರಿಸರ ಪ್ರಜ್ಞೆಯ ಅಭ್ಯಾಸಗಳನ್ನು ಉತ್ತೇಜಿಸಬೇಕು. 1 ಮೆಗಾ ವ್ಯಾಟ್​ ವಿದ್ಯುತ್​ ಉತ್ಪಾದಿಸಬಲ್ಲ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಲು ಕ್ರಮವಹಿಸಿರುವ ಸಂಸ್ಥೆಯ ಬದ್ಧತೆ ಶ್ಲಾನೀಯ ಎಂದರು.
ಇದೇ ಸಂದರ್ಭಲ್ಲಿ ವಿದ್ಯಾರ್ಥಿಗಳು ನಶೆಮುಕ್ತ ಭಾರತ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್​, ಸಂಸ್ಥಾಪಕ ಅಧ್ಯಕ್ಷ ಡಾ.ಎ.ಸಿ. ಷಣ್ಮುಗಂ, ಅಧ್ಯಕ್ಷೆ ಲಲಿತಾ ಲಕ್ಷಿ$್ಮ, ಅಧ್ಯಕ್ಷ ಎ.ಸಿ.ಎಸ್​. ಅರುಣ್​ಕುಮಾರ್​, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್​. ವಿಜಯಾನಂದ, ಸಿಇಒ ಸಿ.ಎನ್​.ಸೀತಾರಾಮ್​, ಡೀನ್​ ಡಾ.ಬಿ. ಸತ್ಯಮೂರ್ತಿ, ವೈದ್ಯಕಿಯ ಸಲಹೆಗಾರ ಡಾ.ಎಸ್​. ನವೀನ್​, ಪ್ರಾಂಶುಪಾಲ ಡಾ. ಬಸವರಾಜ ಭಂಡಾರೆ, ವೈದ್ಯಕಿಯ ಅಧೀಕ್ಷಕ ಡಾ. ಪ್ರವಿಣ್​ಕುಮಾರ್​ ಉಪಸ್ಥಿತರಿದ್ದರು.

ಬಾಕ್ಸ್​....


ದೇಶಾದ್ಯಂತ ಅಭಿಯಾನಕ್ಕೆ ಚಾಲನೆ
ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದ್ದ ಮಾದಕವಸ್ತು ಮುಕ್ತ ಭಾರತ ಅಭಿಯಾನಕ್ಕೆ ವರ್ಚುವಲ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಎಸಿಎಸ್​ ಕನ್ವೆನ್ಷನ್​ ಸೆಂಟರ್​ನಲ್ಲಿ ನೇರ ಪ್ರಸಾರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net