ನಗರದಲ್ಲಿ ಆಯೋಜಸಿದ್ದ "ದಿಮಾಗಿ ನಕ್ಸಲಿಸಂ' ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮ ಸಂಟನೆಯ ಸಂಸ್ಥಾಪಕ ಸಂತೋಷ್ ಕೆಂಚಂಬ ಮಾತನಾಡಿದರು. ರಾಜ್ಯ ಹಿಂದೂ ಜನ ಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ, ವಾಗ್ಮಿ ಚಕ್ರವರ್ತಿ ಸುಲಿಬೆಲೆ ಇದ್ದರು.
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ಹರಿಬಿಡುವ ಮೂಲಕ ಜನರಲ್ಲಿ ಗೊಂದಲ, ದೇಶ ವಿರೋಧಿ ವ್ಯವಸ್ಥೆ ಸೃಷ್ಟಿಸುವ ಷಡ್ಯಂತರ ನಡೆಯುತ್ತಿದೆ ಎಂದು ರಾಷ್ಟ್ರ ಧರ್ಮ ಸಂಟನೆ ಸಂಸ್ಥಾಪಕ ಸಂತೋಷ್ ಕೆಂಚಂಬ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ವಾಸವಿ ಹಾಸ್ಟೆಲ್ ಸಭಾಂಗಣದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಗುರುವಾರ ಆಯೋಜಿಸಿದ್ದ "ದಿಮಾಗಿ ನಕ್ಸಲಿಸಂ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ತಪು$್ಪ ಸಂದೇಶಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಿಲ್ಲಬೇಕು. ಇದಕ್ಕೆಲ್ಲ ಹಿಂದೂಗಳ ಸಂಟನೆ ಮುಖ್ಯ ಎಂದರು.
ಲೋಕಸಭೆಯ ಮುಂಗಾರು ಅಧಿವೇಶನದ ಸಮಯದಲ್ಲಿ ಜಿರಳೆ ಪಕ್ಷದವರು ನೀಟ್ ಪರೀೆ ಪ್ರಕರಣವನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸಿದರು. ಪ್ರಕರಣದ ವಿರುದ್ಧ ಕ್ರಮ ಆಗಿದ್ದರು ಸಹ ಅಸಹ್ಯಕರ ಚಿತ್ರಗಳನ್ನು ನೆಪವಾಗಿ ಬಳಸಿಕೊಂಡು ಅಧಿವೇಶನಕ್ಕೆ ಅಡ್ಡಿಪಡಿಸಿದ್ದಾರೆ. ಅವರ ಪ್ರಯತ್ನವೆಲ್ಲ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಮಸೂದೆಯನ್ನು ವಿರೋಧಿಸುವ ಕೆಲಸ ಆಗಿತ್ತು ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಜಿರಳೆ ಅಂದೋಲನ ಜೀವಿಗಳು, ದಿಮಾಗಿ ನಕ್ಸಲ್ಗಳು ದೇಶದ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಯುವಕರು ಮುಂದಾಗಬೇಕು ಎಂದರು.
ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಂತಹ ಸಮುಯದಲ್ಲಿ ದೇಶ ವಿರೋಧಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳೆಲ್ಲ ಸಂಘಟಿತರಾಗಿ ದೇಶ ವಿರೋಧಿ ಸಂಚುಗಳನ್ನು ಮೆಟ್ಟಿನಿಲ್ಲಬೇಕು ಎಂದು ಎಚ್ಚರಿಸಿದರು.
ರಾಜ್ಯ ಹಿಂದು ಜನ ಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಮತ್ತಿತರರಿದ್ದರು.