ಎಸ್​ಟಿಪಿ ಘಟಕಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ|bwssb

ಜಲಮಂಡಳಿ
ಜಲಮಂಡಳಿ
Published on
ಬೆಂಗಳೂರು: ತ್ಯಾಜ್ಯನಿರು ಸಂಸ್ಕರಣಾ ಘಟಕಗಳಲ್ಲಿ (ಎಸ್​ಟಿಪಿ) ಯಾವುದೇ ರೀತಿಯ ಅವಘಡಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಅಧ್ಯೆ ಡಾ.ಎನ್​. ಮಂಜುಳಾ ಸೂಚನೆ ನೀಡಿದ್ದಾರೆ. 
ಕಾವೇರಿ ಭವನದಲ್ಲಿ ಜಲಮಂಡಳಿ ವತಿಯಿಂದ ನಡೆದ ಆರೋಗ್ಯ ಮತ್ತು ಸುರಕ್ಷತೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ನೌಕರರು ಸುರಕ್ಷತೆಗೆ ಆದ್ಯತೆ ನೀಡಬೇಕು. ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ನೌಕರರ ಸುರಕ್ಷತೆ ದೃಷ್ಟಿಯಿಂದ ಈ ಕಾರ್ಯಗಾರ ಹಮ್ಮಿಕೊಂಡಿದ್ದು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಚರ್ಚೆ ನಡೆಸಲಾಗುವುದು. ಅಲ್ಲದೆ, ಮುಕ್ತವಾಗಿ ಎಲ್ಲರೂ ಚರ್ಚೆ ಮಾಡಬೇಕು, ಯಾವುದೇ ತೊಂದರೆ, ಸಮಸ್ಯೆಗಳಿದ್ದರೆ ಚರ್ಚೆ ಮೂಲಕ ವ್ಯಾಪ್ತಿಯ ಅಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಮಂಜುಳಾ ಹೇಳಿದರು.
ಜಲಮಂಡಳಿಯ ಮುಖ್ಯ ಇಂಜಿನಿಯರ್​ಗಳು, ಎಸ್​ಟಿಪಿ ವಿಭಾಗದ ನೌಕರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net