ಎಐ ತಂತ್ರಜ್ಞಾನ ಬಳಸಿ ಗುಂಡಿಮುಕ್ತ ರಸ್ತೆಗೆ ಕ್ರಿಯಾಯೋಜನೆ ರೂಪಿಸಿ-

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್​. ರಮೇಶ್​ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ರಸ್ತೆಗಳ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ, ಗುಂಡಿಮುಕ್ತ ರಸ್ತೆ ನಿಮಾರ್ಣ, ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಆಯುಕ್ತ ಡಿ.ಎಸ್​. ರಮೇಶ್​ ಕಾಮಗಾರಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಎಐ ತಂತ್ರಜ್ಞಾನ ಬಳಸಿಕೊಂಡು ವಾಹನಗಳಿಗೆ ವಿಶೇಷ ಕ್ಯಾಮರಾಗಳನ್ನು ಅಳವಡಿಸಿ, ಯೋಲೊ ಇಮೇಜ್​ ಪ್ರೊಸೆಸಿಂಗ್​ ಮಾದರಿಯ ಮೂಲಕ ಪೂರ್ವ ಪಾಲಿಕೆ ವ್ಯಾಪ್ತಿಯ ಸುಮಾರು 1,600 ಕಿ.ಮೀ. ರಸ್ತೆಗಳನ್ನು ಸಂಪೂರ್ಣವಾಗಿ ಸ್ಕ್ಯಾನ್​ ಮಾಡಲಾಗಿದ್ದು, ಈ ಸಮೀಕ್ಷೆಯ ಆಧಾರದ ಮೇಲೆ ನಗರ ಪಾಲಿಕೆ ವ್ಯಾಪ್ತಿಯು ರಸ್ತೆಗಳ ಸ್ಥಿತಿಗತಿ, ರಸ್ತೆ ಗುಂಡಿಗಳು, ರಸ್ತೆ ಮೇಲ್ಮೈ ಹಾನಿ, ಯುಟಿಲಿಟಿ ಸಂಪರ್ಕಕ್ಕಾಗಿ ರಸ್ತೆ ಅಗೆತ ಹಾಗೂ ಇತರೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ರಸ್ತೆಗಳ ವೈಜ್ಞಾನಿಕ ವರ್ಗೀಕರಣ:
ಎಐ ವರದಿಯಲ್ಲಿ ರಸ್ತೆಗಳನ್ನು ಅವುಗಳ ಸ್ಥಿತಿಗತಿಯನ್ನು ಆಧರಿಸಿ ಐದು ಪ್ರಕರಣಗಳಾಗಿ ವರ್ಗೀಕರಿಸಲಾಗಿದೆ. ಪ್ರಕರಣ&1 ಉತ್ತಮ ಸ್ಥಿತಿಯ ರಸ್ತೆಗಳು, ಪ್ರಕರಣ&2 ಸಣ್ಣಮಟ್ಟದ ಮೇಲ್ಮೈ ಬಿರುಕುಗಳಿರುವ ರಸ್ತೆಗಳು, ಪ್ರಕರಣ&3 ತಳಪಾಯ ಹಾನಿಯಿಂದ ರಚನಾತ್ಮಕ ದೋಷ ಕಂಡುಬಂದಿರುವ ರಸ್ತೆಗಳು, ಪ್ರಕರಣ&4 ಜಲಮಂಡಳಿ ಅಥವಾ ಇತರ ಯುಟಿಲಿಟಿ ಕಾಮಗಾರಿಗಳಿಂದ ಹಾನಿಗೊಳಗಾದ ರಸ್ತೆಗಳು, ಪ್ರಕರಣ&5 ತೀವ್ರವಾಗಿ ಹಾಳಾಗಿರುವ ಅಥವಾ ಕಚ್ಚಾ ರಸ್ತೆಗಳು. ಈ ವರ್ಗೀಕರಣದ ಆಧಾರದ ಮೇಲೆ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಆದ್ಯತೆ ನಿಗದಿಪಡಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದರು.
ಸಭೆಯಲ್ಲಿ ಅಪರ ಆಯುಕ್ತ ಲೋಖಂಡೆ ಸ್ನೇಹಲ್​ ಸುಧಾಕರ್​ ಇದ್ದರು.
ಪ್ರತಿ ರಸ್ತೆಗೂ ವಿಶಿಷ್ಟ ಗುರುತು ಸಂಖ್ಯೆ
ನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ರಸ್ತೆಯನ್ನು ಡಿಜಿಟಲ್​ ವ್ಯವಸ್ಥೆಯಡಿ ತರಲು ಪ್ರತಿ ರಸ್ತೆಗೆ ವಿಶಿಷ್ಟ ರಸ್ತೆ ಗುರುತು ಸಂಖ್ಯೆ ನೀಡಲಾಗಿದ್ದು, ರಸ್ತೆಯ ಹೆಸರು, ವಾರ್ಡ್​ ಸಂಖ್ಯೆ, ಜಿಪಿಎಸ್​ ಸ್ಥಳ, ರಸ್ತೆಯ ಉದ್ದ, ಫೋಟೋ ಹಾಗೂ ಹಾನಿಯ ವಿವರಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿರ್ವಹಣೆ ಇನ್ನಷ್ಟು ಸುಲಭವಾಗಲಿದೆ ಎಂದು ಆಯುಕ್ತರು ತಿಳಿಸಿದರು.
ಮುಖ್ಯಂಶಗಳು 
* ಎಐ ಆಧಾರಿತ ನಿಖರ ಪ್ಯಾಚ್​ವರ್ಕ್​ ಅಂದಾಜು
* ಪ್ರಾಯೋಗಿಕವಾಗಿ ವಾರ್ಡಗಳಲ್ಲಿ ಕ್ರಿಯಾಯೋಜನೆ
* ಒಂದು ತಿಂಗಳಲ್ಲಿ ಗುಂಡಿ ಮುಕ್ತ ರಸ್ತೆ ಮಾಡಲು ಗುರಿ ನಿಗದಿ
* ವೈಜ್ಞಾನಿಕ ರೀತಿಯಲ್ಲಿ ಪ್ಯಾಚ್​ವರ್ಕ್​ ನಡೆಸಲು ಸೂಚನೆ
* ರಸ್ತೆ ಅಗಲೀಕರಣಕ್ಕೂ ಎಐ ನೆರವು
* ಕಟ್ಟಡ ನಿಮಾರ್ಣ ತ್ಯಾಜ್ಯ ತೆರವು ಅಭಿಯಾನಕ್ಕೆ ವೇಗ
* ಇತರೆ ಇಲಾಖೆಗಳೊಂದಿಗೆ ಸಮನ್ವಯಕ್ಕೆ ಸೂಚನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net