ಪ್ರತಿಭಟನೆ ವೇಳೆ ಮಾತನಾಡಿದ ಕೃಷಿ ಪದವೀಧರರು, ಕೆಇಎ ಅಧಿಸೂಚನೆ ಹೊರಡಿಸಿದ ಬಳಿಕ ಪರಿಷ್ಕೃತ ರೂಪದಲ್ಲಿ ಖಾಸಗಿ ವಿವಿಯವರಿಗೆ ಪರೀಕ್ಷೆ ಬರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಬಯೋಟೆಕ್ ಇಂಜಿನಿಯರಿಂಗ್ ಪದವೀಧರರು ಉನ್ನತ ಶಿಕ್ಷಣಕ್ಕೆ ಸಮಾನವಾಗಿದ್ದು, ಅವರನ್ನೂ ನಮ್ಮ ವಿದ್ಯಾರ್ಹತೆಗೆ ಹೋಲಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಹಿಂದೆಯೇ ವಾಸ್ತವವನ್ನು ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ಈಗ ಏಕಾಏಕಿ ಕೆಇಎ ಮೂಲಕ ವಿವಿಧ ಕೋರ್ಸ್‌ಗಳ ಪದವೀಧರರೆಲ್ಲರಿಗೂ ಎಕ್ಸಾಂ ಬರೆಯಲು ಅರ್ಹತೆ ನಿಗದಿ ಮಾಡಲಾಗಿದೆ. ಈ ಅಧಿಸೂಚನೆಯನ್ನು ವಾಪಸ್ ಪಡೆದು ಪರಿಷ್ಕೃತ ರೂಪದಲ್ಲಿ ಹಿಂದಿದ್ದಂತೆ ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.