ಸರ್​ ಎಂ.ವಿ. ತಾಂತ್ರಿಕ ಕೌಶಲ ಅಳವಡಿಸಿಕೊಳ್ಳಿರಿ

mvs-technical-skills
mvs-technical-skills
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಮತ
  • ಜಿಬಿಎ ನೌಕರರ ಸಂಘದಿಂದ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್‌ಗಳು ಸರ್ ಎಂ.ವಿಶ್ವೇಶ್ವರಯ್ಯನವರ ಕೌಶಲ, ಕರ್ತವ್ಯನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದು ಒಡಿಶಾ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯ ಆವರಣದಲ್ಲಿ ಜಿಬಿಎ - ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮಂಗಳವಾರ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಾಲಿಕೆಯ ಇಂಜಿನಿಯರಿಂಗ್‌ಗಳ ದಿನದಲ್ಲಿ ಅಭಿಯಂತರರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ವಿಶ್ವೇಶ್ವರಯ್ಯನವರ ನೆನಪಿನ ಅರ್ಥದಲ್ಲಿ ಇಂಜನಿಯರ್ಸ್ ದಿನವಾಗಿ ಅಚರಿಸಲಾಗುತ್ತಿದೆ. ಅವರ ನಡೆದ ಹಾದಿಯಲ್ಲಿ ನಾವು ನಡೆದು, ಮುಂದಿನ ಪೀಳಿಗೆಗೆ ನೆನಪಿಸಬೇಕು. ಸರ್ ಎಂ.ವಿ. ಅವರು ತಾಂತ್ರಿಕ ಕೌಶಲ್ಯವುಳ್ಳವರಾಗಿದ್ದರು. ಜ್ಞಾನವನ್ನು ಪೂಜಿಸುವ ರಾಷ್ಚ್ರ ನಮ್ಮದು, ಜ್ಞಾನದಷ್ಟು ಪವಿತ್ರವಾದದ್ದು ಇನ್ನೂಂದು ಇಲ್ಲ. ಹಾಗಾಗಿ ಅಭಿಯಂತರರು ತಾಂತ್ರಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಮದಗದ ಕೆರೆ, ಬಾಚಣಿಕೆ ಡ್ಯಾಂ ಮಣ್ಣಿನಿಂದ ಉಪಯೋಗಿಸಿದ ನಿರ್ಮಾಣ ಮಾಡಿದ್ದರು. ಡ್ಯಾಂ ಕುಸಿಯುವ ಸಂದರ್ಭ ಹಂತದಲ್ಲಿ ಕುಸಿಯದಂತೆ ತಡೆಯಲು ಪರಿಹಾರ ಸೂಚಿಸಿದರು. ವಿಶ್ವೇಶ್ವರಯ್ಯ ರವರು ಥೇಮ್ಸ್ ನದಿಯ ಡ್ಯಾಂ ನಿರ್ಮಾಣದಲ್ಲಿ ಮೇಲಿನಿಂದ ವೀಕ್ಷಣೆ ಮಾಡಿದಾಗ ಇಂಡಿಯಾ ಎಂಬ ಶಬ್ದ ಕಾಣುತ್ತದೆ ಅದರಲ್ಲಿ ಒಂದು ಕಲ್ಲು ತೆಗೆದರೂ ಡ್ಯಾಂ ಉಳಿಯುವುದಿಲ್ಲ ಆ ರೀತಿಯಲ್ಲಿ ನಿರ್ಮಿಸಲಾಗಿತ್ತು ಎಂದರು.
ವಿಶ್ವೇಶ್ವರಯ್ಯನವರು 102 ವರ್ಷದ ಪ್ರಾಯದಲ್ಲೂ ಜ್ಞಾನದಾಹಿ ಆಗಿದ್ದರು. ಪುಸ್ತಕಗಳ ಕುರಿತು ಅಪಾರ ವ್ಯಾಮೋಹ ಹೊಂದಿದ್ದರು. ಸಾಹಿತಿ ಡಿ.ವಿ. ಗುಂಡಪ್ಪ ಜತೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದರು. ಕನ್ನಡ ಭಾಷೆಯ ಬಗ್ಗೆ ಅಪಾರ ಒಲವು ಹೊಂದಿದ್ದರು. ಕೆಆರ್‌ಎಸ್ ಡ್ಯಾಂ ನಿರ್ಮಾಣವಾದ ಬಳಿಕ ಲಕ್ಷಾಂತರ ಎಕರೆ ಜಮೀನಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲು ವಿಶ್ವೇಶ್ವರಯ್ಯನವರು ಕಾರಣ ಎಂದು ನ್ಯಾ. ಕೃಷ್ಣ ದೀಕ್ಷಿತ್ ವಿವರಿಸಿದರು.
ಸಮಾರಂಭದಲ್ಲಿ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್, ವಿಶೇಷ ಆಯುಕ್ತರಾದ ಕೆ.ನಿತೀಶ್, ಆರ್.ವೆಂಕಟಾಚಲಪತಿ, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್, ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ, ಮುಖ್ಯ ಅಭಿಯಂತ ಬಸವರಾಜ್ ಕಬಾಡೆ, ಮುಖ್ಯ ನಗರ ಯೋಜಕ ಬಿ.ಎನ್. ಗಿರೀಶ್, ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹಾಜರಿದ್ದರು.

ಇಂಜನಿಯರ್ಸ್‌ ಕಾಮಗಾರಿ ಸ್ಥಳದಲ್ಲಿರಬೇಕು:

ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಮಾತನಾಡಿ, ಬೃಹತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಮ್ಮ ಪ್ಲಾನ್‌ಗಳಿಗೆ ಎಂ.ವಿಶ್ವೇಶ್ವರಯ್ಯ ಸ್ಪೂರ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕಟ್ಟಡ, ರಸ್ತೆಗಳು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದೆ. ಇಂಜನಿಯರ್‌ಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಇರಬೇಕು, ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಕಾಮಗಾರಿ ಗುಣಮಟ್ಟ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net