ನೋಟಿಸ್ ನೀಡಲಾದ ಒಂದು ವಾರದೊಳಗೆ ವಾಹನ ಮಾಲೀಕರು ಬಂದು ಕಾನೂನಿನ ಅನ್ವಯ ನಿಗದಿಪಡಿಸಿರುವ 500 ರಿಂದ 1,000 ರೂ.ವರೆಗಿನ ದಂಡವನ್ನು ಪಾವತಿಸಿ ತಮ್ಮ ವಾಹನಗಳನ್ನು ಕೊಂಡೊಯ್ಯಲು ಅವಕಾಶವಿರುತ್ತದೆ. ಒಂದು ವಾರದ ಅವಧಿಯ ಒಳಗಾಗಿ ಮಾಲೀಕರು ಬರದಿದ್ದರೆ, ಅಂತಹ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು. ನಂತರವೂ ಮಾಲೀಕರಿಗೆ ದಂಡ ಮತ್ತು ಟೋಯಿಂಗ್ ಚಾರ್ಜ್ ಕಟ್ಟಿ ವಾಹನ ಪಡೆಯಲು ಅವಕಾಶ ಇರುತ್ತದೆ. ಮತ್ತೆಯೂ ಬಾರದಿದ್ದಲ್ಲಿ, ಬಹಿರಂಗ ಹರಾಜು ಹಾಕಲಾಗುವುದು. ನೋಟಿಸ್ ತಪ್ಪಿಸಲು ವಾಹನವನ್ನು ತೆಗೆದುಕೊಂಡು ಹೋಗಿ ಮತ್ತೊಂದು ರಸ್ತೆಯಲ್ಲಿ ನಿಲ್ಲಿಸುವಂತಹ ತಪ್ಪು ಮಾಡುವವರನ್ನು ಗುರುತಿಸಿ, ಅವರಿಗೆ ಮತ್ತಷ್ಟು ಕಠಿಣವಾದ ದಂಡ ಹಾಗೂ ಶಿೆ ವಿಧಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.