ಮೆಡಿಕವರ್ ಆಸ್ಪತ್ರೆ ವೈದ್ಯರಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

 ವೈಟ್ ಫೀಲ್ಡ್ನ ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡ  ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 47 ವರ್ಷದ ರೋಗಿಯ ಎರಡೂ ಮೂತ್ರಪಿಂಡಗಳನ್ನು  ಸುರಕ್ಷಿತವಾಗಿ ತೆರವುಗೊಳಿಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ವೈಟ್ ಫೀಲ್ಡ್ನ ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 47 ವರ್ಷದ ರೋಗಿಯ ಎರಡೂ ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
Published on
ಮಹದೇವಪುರ : ವೈಟ್ ಫೀಲ್ಡ್ನ ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 47 ವರ್ಷದ ರೋಗಿಯ ಎರಡೂ ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ರೋಗಿಯು ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯ ಕಾರಣ ನಿಯಮಿತ ಹೀಮೋಡಯಾಲಿಸಿಸ್ ಪಡೆಯುತ್ತಿದ್ದರು ಎಂದು ವೈದ್ಯರು ತಿಳಿಸಿದರು.
ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಪಿಂಡಗಳನ್ನು ತೆರವುಗೊಳಿಸಿದ ನಂತರ ರೋಗಿಯಲ್ಲಿ ತೀವ್ರ ರಕ್ತದೊತ್ತಡ ಕುಸಿತ ಉಂಟಾದರೂ, ವೈದ್ಯರ ತಂಡ ಮುಂಚಿತ ಸಿದ್ಧತೆಯೊಂದಿಗೆ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದರಿಂದ ರೋಗಿಗೆ ಬಹು ಪ್ರಮಾಣದ ರಕ್ತ ವರ್ಗಾವಣೆ ಹಾಗೂ ಮೂರು ವಿಧದ ವಾಸೋಪ್ರೆಸರ್ ಔಷಧಿಗಳ ಸಹಾಯದಿಂದ ಸ್ಥಿರ ಸ್ಥಿತಿಗೆ ತರಲಾಯಿತು ಎಂದು ವೈದ್ಯರು ಮಾಹಿತಿ ನೀಡಿದರು.
*ಶಸ್ತ್ರಚಿಕಿತ್ಸೆಯಲ್ಲಿ ತೆರವುಗೊಳಿಸಿದ ಪ್ರತಿಯೊಂದು ಮೂತ್ರಪಿಂಡವು ಸುಮಾರು 40 ಸೆಂ.ಮೀ. ಉದ್ದ ಹಾಗೂ 4.5 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿದ್ದು, ಸಾಮಾನ್ಯ ಮೂತ್ರಪಿಂಡದ ಗಾತ್ರ (912 ಸೆಂ.ಮೀ.) ಮತ್ತು ತೂಕ (125175 ಗ್ರಾಂ)ಕ್ಕೆ ಹೋಲಿಸಿದರೆ ಹೆಚ್ಚು ಪಟ್ಟು ದೊಡ್ಡದಾಗಿತ್ತು.
ಕೋಟ್
ರೋಗಿಗಳಲ್ಲಿ ಸೋಂಕು, ರಕ್ತಸ್ರಾವ ಅಥವಾ ತೀವ್ರ ನೋವಿನಂತಹ ತೊಂದರೆಗಳು ಕಾಣಿಸಿಕೊಂಡಾಗ ಸಮಯೋಚಿತ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಜೀವ ಉಳಿಸಲು ಅತ್ಯಂತ ಮುಖ್ಯವಾಗುತ್ತದೆ.
ಡಾ. ಮಾಧವ ದೇಸಾಯಿ
ಕೋಟ್
ನನ್ನ ವೃತ್ತಿಜೀವನದಲ್ಲೆ ಈ ರೀತಿಯ ಪ್ರಕರಣ ಮೊದಲನೆಯದು. ಒಬ್ಬ ವೈದ್ಯರಿಗೆ ವೃತ್ತಿ ಜೀವನಲ್ಲಿ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣ ಸಿಗೋದು, ಅದನ್ನ ಮೆಡಿಕವರ್ ಆಸ್ಪತ್ರೆಯ ತಂಡ ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ಅನುಭವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ.
ಡಾ ದಿಲೀಪ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net