2023ರ ಏ.1ರಿಂದ 2026ರ ಮೇ 31ರವರೆಗೆ ಕಾರ್ಪೋರೇಷನ್ ವ್ಯಾಪ್ತಿಯ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳು ಸೇರಿ ಪ್ರಮುಖ ರೋಡ್‌ಗಳ ಅಭಿವೃದ್ಧಿಗೆ ಇಷ್ಟೊಂದು ಬೃಹತ್ ಮೊತ್ತವು ಬಿಡುಗಡೆಯಾಗಿದೆ. ಈ ಪೈಕಿ, ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ 8,230 ಕೋಟಿ ರೂ. ಹಾಗೂ ರಸ್ತೆಗುಂಡಿಗಳನ್ನು ಮುಚ್ಚಲು 594 ಕೋಟಿ ರೂ. ಸೇರಿದೆ. ಈ ಅನುದಾನವನ್ನು ಅಧಿಕಾರಿಗಳು ಸದ್ಬಳಕೆ ಮಾಡಿದ್ದರೆ ಕನಿಷ್ಠ 10 ವರ್ಷ ಕಾಲ ಸಧೃಢ ಹಾಗೂ ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸಬಹುದಿತ್ತು. ಆದರೆ, ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಾರಣ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.