ಸ್ವಚ್ಛತಾ ಅಭಿಯಾನದಲ್ಲಿ 25 ಪಾರ್ಕ್, 12 ಪ್ಲೇಗ್ರೌಂಡ್ ಶುಚಿ

cleanliness-drive
cleanliness-drive
Published on

ಪ್ರಮುಖ ಮುಖ್ಯಾಂಶಗಳು

  • 1,543 ಕೆ.ಜಿ. ತ್ಯಾಜ್ಯ ತೆರವು, 270 ಪೌರಕಾರ್ಮಿಕರು ಭಾಗಿ
  • ಕೇಂದ್ರ ಪಾಲಿಕೆಯ ಆರು ವಿಭಾಗಗಳಲ್ಲಿ ಕಾರ್ಯಾಚರಣೆ

ಬೆಂಗಳೂರು: ಮಹಾನಗರದ ಕೇಂದ್ರ ಪ್ರದೇಶವನ್ನು ಒಳಗೊಂಡಿರುವ ಸೆಂಟ್ರಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ಪಾಲಿಕೆಯನ್ನಾಗಿಸುವ ನಿಟ್ಟಿನಲ್ಲಿ ಒಂದು ವಾರದಲ್ಲಿ 25 ಉದ್ಯಾನ ಹಾಗೂ 12 ಆಟದ ಮೈದಾನಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದೆ.

ಸ್ವಚ್ಛ ಸರ್ವೇಕ್ಷಣ 2025-26ರ ಶ್ರೇಯಾಂಕ ಸ್ಪರ್ಧೆಯ ಹಿನ್ನೆಲೆಯಲ್ಲಿ 3ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನದ ವೇಳೆ ಪಾಲಿಕೆಯ 6 ವಿಭಾಗಗಳಲ್ಲಿ ಈ ಶುಚಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.

1,543 ಕೆ.ಜಿ. ತ್ಯಾಜ್ಯ ತೆರವು:

ಉದ್ಯಾನ ಹಾಗೂ ಆಟದ ಮೈದಾನಗಳನ್ನು ಸ್ವಚ್ಛ, ಸುರಕ್ಷಿತ ಹಾಗೂ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ 25 ಪಾರ್ಕ್ ಹಾಗೂ 12 ಪ್ಲೇಗ್ರೌಂಡ್ ಸೇರಿ ಒಟ್ಟು 37 ಸ್ಥಳಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಲಾಗಿದೆ. ಈ ವೇಳೆ ಶಾಂತಿನಗರ - 6, ಸಿ.ವಿ. ರಾಮನ್‌ನಗರ - 9, ಶಿವಾಜಿನಗರ - 5, ಗಾಂಧಿನಗರ - 7, ಚಾಮರಾಜಪೇಟೆ- 2 ಹಾಗೂ ಚಿಕ್ಕಪೇಟೆಯ 8 ಸ್ಥಳಗಳಲ್ಲಿ ಒಟ್ಟು 1,543 ಕೆ.ಜಿ. ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಸ್ವಚ್ಛತಾ ಕಾರ್ಯದಲ್ಲಿ 270 ಪೌರಕಾರ್ಮಿಕರು ಹಾಗೂ 88 ಆರೋಗ್ಯ ಮತ್ತು ಸ್ವಚ್ಛತಾ ಸಿಬ್ಬಂದಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net