ಪಿಎಸ್ಡಿ ಖರೀದಿಗೆ 747 ಕೋಟಿ ರೂ., ಸಿವಿಲ್ ಕಾಮಗಾರಿಗೆ 317 ಕೋಟಿ ರೂ. ಹಾಗೂ ಸಿಗ್ನಲಿಂಗ್, ದೂರಸಂಪರ್ಕ ಮತ್ತು ವಿದ್ಯುತ್ ಕಾಮಗಾರಿಗಳಿಗೆ 210 ಕೋಟಿ ರೂ. ವೆಚ್ಚವಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದಾರೆ. ಹೊಸದಾಗಿ ನಿಮಾರ್ಣಗೊಳ್ಳುವ ನಿಲ್ದಾಣಗಳಲ್ಲಿ ಪಿಎಸ್ಡಿ ಅಳವಡಿಕೆ ಸುಲಭವಾದರೂ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ನಿಲ್ದಾಣಗಳಲ್ಲಿ ತಾಂತ್ರಿಕ ಸವಾಲುಗಳ ನಡುವೆಯೂ ಈ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.