ಬೆಂಗಳೂರು: ಹತ್ತನೇ ಆವೃತ್ತಿಯ ಇಂಟರ್ನ್ಯಾಷನಲ್ ಗೇಮ್ಸ್ (10th International School Level Games 2026) ಏಪ್ರಿಲ್ 18 ಮತ್ತು 19ರಂದು ಬೆಂಗಳೂರಿನ ವಿನಾಯಕ ನಗರದ ವಿನಾಯಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಲಿದೆ. ವರ್ಲ್ಡ್ ಆಲ್ ಸ್ಪೋರ್ಟ್ಸ್ ಗೇಮ್ಸ್ ಫೆಡರೇಷನ್ ಮಾನ್ಯತೆಯ ಈ ಕ್ರೀಡಾಕೂಟವನ್ನು ಇಂಟರ್ನ್ಯಾಷನಲ್ ಆಲ್ ಸ್ಪೋರ್ಟ್ಸ್ ಗೇಮ್ಸ್ ಫೆಡರೇಷನ್ ಮತ್ತು ಸೌತ್ ಏಷ್ಯನ್ ಆಲ್ ಸ್ಪೋರ್ಟ್ಸ್ ಗೇಮ್ಸ್ ಫೆಡರೇಷನ್ ಆಯೋಜಿಸಿದೆ.