ಬೆಂಗಳೂರಿನ ಕಲಾ ಪ್ರಪಂಚ; ಪ್ರೇಮಿಗಳು ಮಿಸ್​ ಮಾಡದೆ ಭೇಟಿ ನೀಡಲೇಬೇಕಾದ ಟಾಪ್ 4 ಆರ್ಟ್ ಗ್ಯಾಲರಿಗಳಿವು..Art Galleries

Best Art Galleries in Bengaluru
Best Art Galleries in Bengaluru
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಐಟಿ ಹಬ್​ ಮಾತ್ರವಲ್ಲ ಇಲ್ಲಿದೆ ಕಣ್ಣು ತಂಪಾಗಿಸುವ ಕಲಾ ಪ್ರಪಂಚ.
  • ವೀಕೆಂಡ್​ನಲ್ಲಿ ಮಿಸ್​ ಮಾಡದೇ ನೋಡಲೇ ಬೇಕಾದ ಆರ್ಟ್​ ಗ್ಯಾಲರಿಗಳು.
  • ವೆಂಕಟ್ಟಪ್ಪ, NGMA ಗ್ಯಾಲರಿಗಳಲ್ಲಿ ಕಡಿಮೆ ಹಣ ಕೊಟ್ಟು ಚಿತ್ರಕಲೆಗಳನ್ನು ಕಾಣಬಹುದಾಗಿದೆ.
Best Art Galleries in Bengaluru: ಐಟಿ-ಬಿಟಿ ಸಿಟಿ, ಸ್ಟಾರ್ಟ್​ ಅಪ್​​ಗಳಿಗೆ ಉತ್ತಮ ಪ್ಲಾಟ್​ಫಾರ್ಮ್​ ಒದಗಿಸುವ ನಗರ ಎಂದು ಖ್ಯಾತಿಯೂ ಪಡೆದು ಟ್ರಾಫಿಕ್​ ಸಿಟಿ, ಗಾರ್ಬೇಜ್​ ಸಿಟಿ ಎಂದು ಕುಖ್ಯಾತಿಯೂ ಗಳಿಸಿದ  ಬೆಂಗಳೂರು ಇಷ್ಟಕ್ಕೆ ಸೀಮಿತವಾಗಿಲ್ಲ. ಇಲ್ಲಿನ  ವಾತಾವರಣ, ಕಲೆ- ಸಂಸ್ಕೃತಿ, ಆಹಾರ ಎಲ್ಲವೂ ಒಂದೊಂದು ಇತಿಹಾಸವನ್ನು ಹೇಳುತ್ತದೆ. ಬೆಂಗಳೂರು ಎಂದ ತಕ್ಷಣಕ್ಕೆ ನೆನಪಾಗೋದು ಲಾಲ್​​ಬಾಗ್​, ಟಿಪ್ಪು ಕೋಟೆ, ಕಬ್ಬನ್​ ಪಾರ್ಕ್​​ ಆದರೆ, ಇದನ್ನು ಹೊರೆತು ಪಡಿಸಿ ನೊಡಬೇಕಾದ ಸುಂದರ ಸ್ಥಳಗಳು ಇಲ್ಲಿವೆ. ಅವು ಯಾವುದು ಎಲ್ಲಿದೆ, ಎಷ್ಟು ಪ್ರವೇಶ ಶುಲ್ಕ ಕೊಡಬೇಕು ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಸಾಮಾನ್ಯಾವಾಗಿ ದೂರದ ಊರುಗಳಿಂದ ಬೆಂಗಳೂರಿಗೆ ಆಗಮಿಸುವವರನ್ನು ಕರೆದುಕೊಂಡು ಹೋಗೋದು ಇಲ್ಲಿನ ಪ್ರಸಿದ್ಧ ಆಡಳಿತ ಕಟ್ಟಡ ವಿಧಾನಸೌಧ ಹಾಗೂ ಕಬ್ಬನ್​ ಪಾರ್ಕ್​ ವಿಶ್ವೇಶ್ವರ ಮ್ಯೂಸಿಯಂ ಬಿಟ್ಟರೆ, ಲಾಲ್​ ಬಾಗ್​.  ಆದರೆ, ಇಲ್ಲಿರುವ ಕೆಲವೊಂದು ಆರ್ಟ್​ ಗ್ಯಾಲರಿಗಳು ಚಿತ್ರ ರಚನೆಕಾರರಿಗೆ ಮಾತ್ರವಲ್ಲ ಚಿತ್ರ ಬಿಡಿಸುವುದನ್ನು ಇಷ್ಟಪಡುವವರಿಗೂ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಪ್ರೇಮಿಗಳ ಡೇಟಿಂಗ್​ಗಂತೂ  ಹೇಳಿ ಮಾಡಿಸಿದ ಸ್ಥಳವಾಗಿದೆ.

ನ್ಯಾಷನಲ್​ ಗ್ಯಾಲರಿ ಆಫ್​​ ಮಾಡರ್ನ್​ ಆರ್ಟ್​

ಇದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್, ಗೋಫ್, 49, ಅರಮನೆ ರಸ್ತೆ, ವಸಂತ ನಗರದಲ್ಲಿದೆ. ಇಲ್ಲಿಗೆ ಪ್ರವೇಶ ಪಡೆಯಲು 25ರೂಪಾಯಿ ಮಾತ್ರ ಪಾವತಿ ಮಾಡಬೇಕಾಗಿರುತ್ತದೆ. ಇಲ್ಲಿ ರಾಜ ರೆವಿ ವರ್ಮಾ, ರಬೀಂದ್ರ ನಾಥ್​ ಟ್ಯಾಗೂರ್​​  ಹಾಗೂ ಜಾಮಿನಿ ರಾಯ್​ ಸೇರಿದಂತೆ ಖ್ಯಾತ ಚಿತ್ರ ರಚನೆಕಾರರ ಪೇಟಿಂಗ್ಸ್​ ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಬಟ್ಟೆ, ಹಲಗೆ, ಬಿಳಿ ಹಾಳೆ ಸೇರಿದಂತೆ ನಾನಾ ರೀತಿಯ ಚಿತ್ರ ಪರಿಕರಗಳ ಮೇಲೆ ಮೂಡಿಬಂದ ಕಲೆಯನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಸೋಮಾವಾರ ರಜಾ ದಿನವಾಗಿದ್ದು, ಮಿಕ್ಕೆಲ್ಲ ದಿನವೂ ಮುಂಜಾನೆ 10ರಿಂದ ಸಂಜೆ 6ರವರೆಗೂ ವೀಕ್ಷಿಸಬಹುದಾಗಿದೆ. 

ವೆಂಕಟ್ಟಪ್ಪ ಆರ್ಟ್​ ಗ್ಯಾಲರಿ

ಬೆಂಗಳೂರಿನ ಕಬ್ಬನ್​ ಪಾರ್ಕ್​​ನ ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ಬೀದಿ, ಸಂಪಂಗಿ ರಾಮ ನಗರ ಬಳಿ ಇರುವ ವೆಂಕಟ್ಟಪ್ಪ ಆರ್ಟ್​ ಗ್ಯಾಲರಿಯನ್ನು ಅವರ ಸ್ಮರಣಾರ್ಥವಾಗಿ 1975ರಲ್ಲಿ ನಿರ್ಮಿಸಲಾಗಿತ್ತು. ಕಲಾವಿದ ಹೆಬ್ಬಾರ್​​, ಶಿಲ್ಪಿ ರಾಜಾರಾಮ್​ ಸೇರಿದಂತೆ  ಕರ್ನಾಟಕದ ಶ್ರೇಷ್ಠ ಚಿತ್ರಕಾರರ  ಪೇಟಿಂಗ್ಸ್​ಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಇಷ್ಟೇ ಅಲ್ಲದೆ, ಅವರು ಬಳಕೆ ಮಾಡುತ್ತಿದ್ದ ಬಣ್ಣ, ಬ್ರಷ್​​​, ಕನ್ನಡಕ ಸೇರಿದಂತೆ ಎಲ್ಲವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ . ಮಂಗಳವಾರದಿಂದ ಶುಕ್ರವಾರದವರೆಗೂ ಮುಂಜಾನೆ 10ರಿಂದ ಸಂಜೆ 6:30ರವರೆಗೂ ಭೇಟಿ ನೀಡಬಹುದಾಗಿದೆ. 

ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ

ಶಾಂತಿ ರಾಡ್, ಭೀಮಾ ಗಾರ್ಡನ್, ಶಾಂತಿ ನಗರದ ಬಳಿ ಇರುವ ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ ಲಾಭರಹಿತ ಸಂಸ್ಥೆಯಾಗಿದೆ.  ಹೆಸರಾಂತ ಕಲಾವಿದೆ ಸುರೇಶ್​ ಜಯರಾಮ್​ ಸ್ಥಾಪಿಸಿದ  ಕೇಮದ್ರ ಇದಾಗಿದೆ. ಇಲ್ಲಿ  ಎಸ್​ಜಿ ವಾಸುದೇವ್​​, ರವಿಕುಮಾರ್,​​​ ಕಾಶಿ, ಪರೇಶ್​ ಮೈಟಿ ಹಾಗೂ ವಿಜಿ ವೇಣುಗೋಪಾಲ್​ ಅವರ ಚಿತ್ರಕಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. 

ಸರ್ಕಾರಿ ವಸ್ತು ಸಂಗ್ರಹಾಲಯ

ದಕ್ಷಿಣ ಭಾರತದ ಹಳೆಯ 2ನೇ ವಸ್ತು ಸಂಗ್ರಹಾಲಯವು ವೆಂಕಟ್ಟಪ್ಪ ಗ್ಯಾಲರಿ ಪಕ್ಕದಲ್ಲಿಯೇ ಇದೆ. ಬೆಂಗಳೂರಿನ ಅತ್ಯಂತ ಹಳೆಯ ವಸ್ತು ಸಂಗ್ರಹಾಲಯವೂ ಹೌದು. ಇಲ್ಲಿ  ಕನ್ನಡದ ಮೊದಲ ಶಾಸನವಾದ  ಹಲ್ಮಿಡಿ ಶಾಸನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹಳೆಯ ಆಭರಣ, ಶಿಲ್ಪಗಳು ಹಾಗೂ ನಾಣ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸೋಮವಾರ ಒಂದು ದಿನ ಬಿಟ್ಟು ಮಿಕ್ಕೆಲ್ಲ ದಿನವೂ ಮುಂಜಾನೆ 10ರಿಂದ 5ರವರೆಗೆ ಭೇಟಿ ನೀಡಬಹುದಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net