ಬೇರೆ ಬೇರೆ ಮದ್ವೆಯಾಗಿದ್ರೂ ಇಬ್ಬರ ನಡುವೆ ಪ್ರೀತಿ: ಪತ್ನಿ ಬಿಟ್ಟು ಬಂದವನಿಂದಲೇ ನಡೆಯಿತು ದುರಂತ!

Security Gaurd
Published on

ಬೆಂಗಳೂರು: ಪ್ರೇಯಸಿಯನ್ನು ಕೊಲೆ ಮಾಡಿ ಸೆಕ್ಯುರಿಟಿ ಗಾರ್ಡ್​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋಣನ ಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವರ್ಸ್ ಕಾಲನಿಯಲ್ಲಿ ನಡೆದಿದೆ.

ರಮ್ಯ (35) ಕೊಲೆಯಾದ ಮಹಿಳೆ. ಚಿಕ್ಕಮೊಗ (45) ಆತ್ಮಹತ್ಯೆ ಮಾಡಿಕೊಂಡ ಸೆಕ್ಯುರಿಟಿ ಗಾರ್ಡ್. ಇಬ್ಬರು ಮಂಡ್ಯ ಮೂಲದ ಮದ್ದೂರಿನವರು. ಇಬ್ಬರಿಗೂ ಸಹ ಬೇರೆ-ಬೇರೆ ಮದುವೆಯಾಗಿತ್ತು. ಆದರೂ ಸಹ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಇದರ ನಡುವೆ ಚಿಕ್ಕಮೊಗ ಹೆಂಡತಿಯನ್ನು ಬಿಟ್ಟು ರಮ್ಯ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದ. ನಿನ್ನೆ ರಾತ್ರಿ ರಮ್ಯಳನ್ನು ಕೊಲೆ ಮಾಡಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net