

ಹೈದರಾಬಾದ್: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತೆಲಂಗಾಣದಲ್ಲಿ ದೇವಮಾನವ ಸ್ಥಾನವನ್ನು ಹೊಂದಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಸಿಎಂ ಆದಾಗಿನಿಂದ ಅವರ ಕಾರ್ಯಗಳನ್ನು ಜನರು ಸಹ ಮೆಚ್ಚಿಕೊಂಡಿದ್ದು, 2014ರಿಂದಲೂ ಕೆಸಿಆರ್ ತೆಲಂಗಾಣದ ರಾಜನಾಗೆಯೇ ಉಳಿದಿದ್ದಾರೆ.
ಇನ್ನು ಕೆಸಿಆರ್ ಹುಟ್ಟುಹಬ್ಬವೆಂದರೆ ಅವರ ಪಕ್ಷದ ಕಾರ್ಯಕರ್ತರಿಗೆ ಮತ್ತು ಸಚಿವರಿಗೆ ಹಬ್ಬವೋ ಹಬ್ಬ. ಅದೇ ರೀತಿ ಕೆಸಿಆರ್ ಸಹ ಎಲ್ಲರನ್ನು ಪ್ರೀತಿಯಿಂದಲೇ ಕಾಣುತ್ತಾರೆ. ಇಂದು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಚಿವ ತಲಸನಿ ಶ್ರೀನಿವಾಸ್ ಯಾದವ್, ಎರಡೂವರೆ ಕೆ.ಜಿ. ಚಿನ್ನದ ಸೀರೆ ಮಾಡಿಸಿ ಯಲ್ಲಮ್ಮ ದೇವತೆಗೆ ಕಾಣಿಕೆಯಾಗಿ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಇನ್ನು ಕೆಸಿಆರ್ ಹುಟ್ಟುಹಬ್ಬದಂದು ತೆಲಂಗಾಣದಾದ್ಯಂತ ಇಡೀ ದಿನ ಅನೇಕ ಕಾರ್ಯಕ್ರಮಗಳು ಸಹ ನಡೆದಿವೆ. ಟಿಆರ್ಎಸ್ ನಾಯಕರು ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಟ್ಟಿದ್ದಾರೆ.
ಇನ್ನು ಯಾದವ್ ಚಿನ್ನದ ಸೀರೆ ಮಾತ್ರವಲ್ಲದೆ, ಅಮೀರ್ಪೇಟೆಯಲ್ಲಿರುವ ಗುರುದ್ವಾರ ಸಾಹೇಬ್ ಮತ್ತು ಸಿಖಂದರಬಾದ್ನಲ್ಲಿರುವ ಉಜ್ಜೈನಿ ಮಹಾಕಾಳಿ ದೇವಸ್ಥಾನ, ಗಣೇಶ್ ದೇವಸ್ಥಾನ ಮತ್ತು ವೆಸ್ಲಿ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)