ಪ್ರೇಯಸಿಯನ್ನು ಇಂಪ್ರೆಸ್​ ಮಾಡಲು ಗುಪ್ತಾಂಗಕ್ಕೆ ಸ್ಟೀಲ್​ ರಿಂಗ್ ಹಾಕಿಕೊಂಡ ಯುವಕ! ಮುಂದೇನಾಯ್ತು ಗೊತ್ತಾ?

ring
Published on

ಬ್ಯಾಂಕಾಕ್: ಪ್ರೇಮಿಗಳ ದಿನದಂದು ಪ್ರಿಯತಮೆಯನ್ನು ಇಂಪ್ರೆಸ್​ ಮಾಡಲು ಯುವಕರು ಏನೇನೋ ಸರ್ಕಸ್​ ಮಾಡುತ್ತಾರೆ. ಇಲ್ಲೊಬ್ಬ ಯುವಕ ಮಾಡಿರುವ ಸರ್ಕಸ್​ ಕಥೆ ಕೇಳಿದರೆ ನೀವು ಬಿದ್ದು ಬಿದ್ದು ನಗುವುದು ಗ್ಯಾರಂಟಿ..

ಫೆಬ್ರವರಿ 14ರಂದು ತನ್ನ ಪ್ರಿಯತಮೆಗೆ ಸರ್ಪೈಸ್​ ನೀಡಿ ಆಕೆಯನ್ನು ವಿಶಿಷ್ಟ ರೀತಿಯಲ್ಲಿ ಇಂಪ್ರೆಸ್​ ಮಾಡಲು ಯುವಕ ನಿರ್ಧರಿಸಿದ್ದಾನೆ. ಅದಕ್ಕೆಂದು ಫೆಬ್ರವರಿ 12ರಂದು ಕುಳಿತು ಯೋಚಿಸಿದ್ದಾನೆ. ತನ್ನ ಬಳಿ ಇದ್ದ ಕಿಟ್​ ತೆಗೆದಿದ್ದಾನೆ. ಅದರಲ್ಲಿ ಕಂಡ ಸ್ಟೀಲಿನ ರಿಂಗ್​ ಒಂದನ್ನು ತೆಗೆದು ಗುಪ್ತಾಂಗಕ್ಕೆ ಹಾಕಿಕೊಂಡಿದ್ದಾನೆ. ಹಾಗೆ ಮಾಡುವುದರಿಂದ ಅಲ್ಲಿ ರಕ್ತ ಸಂಚಲನ ಹೆಚ್ಚಾಗಿ ಅದು ಹೆಚ್ಚು ದೊಡ್ಡದಾಗಿ ಕಾಣಬಹುದು ಎಂದು ಆತ ಊಹಿಸಿದ್ದನು.

ಆದರೆ ಯುವಕನ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ರಿಂಗ್​ನ್ನು ವಾಪಾಸು ತೆಗೆಯಲು ಬಂದಿಲ್ಲ. ವಿಪರೀತಿ ನೋವು ಆರಂಭವಾಗಿದೆ. ಗುಪ್ತಾಂಗ ಊದಲಾರಂಭಿಸಿದೆ. ಎರಡು ದಿನಗಳ ಕಾಲ ರಿಂಗ್​ನ್ನು ತೆಗೆಯಲು ಯುವಕ ನಾನಾ ರೀತಿಯ ಸಾಹಸ ಮಾಡಿದ್ದಾನೆ. ಪ್ರೇಯಸಿಯನ್ನು ಇಂಪ್ರೆಸ್​ ಮಾಡಬೇಕೆಂದುಕೊಂಡಿದ್ದ ದಿನದಂದೂ ತನ್ನಿಂದ ರಿಂಗ್​ ವಾಪಾಸು ತೆಗೆಯಲು ಆಗದಿದ್ದಾಗ ಆಸ್ಪತ್ರೆಯತ್ತ ಮುಖ ಮಾಡಿದ್ದಾನೆ. ಸತತ ಒಂದು ಗಂಟೆಯ ಕಾಲ ಆಪರೇಷನ್​ ಮಾಡಿದ ನಂತರ ವೈದ್ಯರು ಆ ರಿಂಗ್​ನ್ನು ಕಟ್​ ಮಾಡಿ ತೆಗೆದಿದ್ದಾರೆ.

ಸಾಮಾನ್ಯವಾಗಿ ಜನರು ಕೈ ಬೆರಳಲ್ಲಿ ಉಂಗುರು ಸಿಕ್ಕಿ ಹಾಕಿಕೊಂಡಿತೆಂದು ನಮ್ಮ ಬಳಿ ಬರುತ್ತಾರೆ. ಆದರೆ ಇದೇ ಮೊದಲನೇ ಬಾರಿ ಇಂತಹ ವಿಚಿತ್ರ ಕೇಸ್​ ಒಂದು ಬಂದಿದ್ದು ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ವಿಚಿತ್ರ ಸಾಹಸಗಳನ್ನು ಯಾರೂ ಮಾಡಬಾರದು ಎನ್ನುವ ಸಲಹೆಯನ್ನೂ ಅವರು ಕೊಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net