

ಬೆಂಗಳೂರು: ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಕಾರ್ಯಕಾರಿ ಮಂಡಳಿಗೆ ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಅಧ್ಯಕ್ಷ ಬಿ. ಲೋಕೇಶ್ ಅವರು ಆಯ್ಕೆಯಾಗಿದ್ದಾರೆ.
ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿ. ಲೋಕೇಶ್ ಅವರು ಚುನಾವಣೆ ಇಲ್ಲದೇ ಅವಿರೋಧವಾಗಿ ಆಯ್ಕೆ ಆಗಿದ್ದರು.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ (ರಿ)ದ 63ನೇ ತ್ರೈ ಮಾಸಿಕ ಸಭೆಯಲ್ಲಿ ಜಿಲ್ಲಾ ಪ್ರಾತಿನಿಧ್ಯ ವರ್ಗದ ಅಡಿಯಲ್ಲಿ ಸೆಕ್ಷನ್ 18(7)ರ ಬೈಲಾ ನಿಬಂಧನೆಗಳ ಪ್ರಕಾರ ಬಿ. ಲೋಕೇಶ್ ಅವರನ್ನು 2021 ರಿಂದ 2024 ರವರೆಗೂ ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು ಎಂದು ಕೆ.ಸಿ.ಡಿ.ಎ ಕಾರ್ಯದರ್ಶಿ ಎ.ಕೆ.ಜೀವನ್ ತಿಳಿಸಿದರು.
ಹಲವಾರು ವರ್ಷಗಳ ಕಾಲ ಕೆ.ಸಿ.ಡಿ ಎ ಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೆ, ಈಗ ಕಾರ್ಯಕಾರಿ ಮಂಡಳಿಯ ಸದಾಸ್ಯನಾಗಿ ಮತ್ತೆ ಆಯ್ಕೆ ಆಗಿರುವುದು ತುಂಬಾ ಖುಷಿಯ ವಿಚಾರ. MDCDO ರಾಜ್ಯಮಟ್ಟದಲ್ಲಿ ಹೆಸರು ಮಾಡುವುದರ ಜೊತೆಗೆ ನಮ್ಮ ಜಿಲ್ಲೆಯ ಎಲ್ಲಾ ಔಷದ ವ್ಯಾಪಾರಿಗಳಿಗೆ ಹಾಗೂ ವಿತರಕರ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕೆಲಸಮಾಡುತ್ತೇನೆ ಹಾಗೂ ನಮ್ಮ ಸಂಸ್ಥೆಯ ಎಲ್ಲಾ ಧೇಯೋದ್ದೇಶಗಳನ್ನು ಈಡೇರಿಸುತ್ತೇನೆ ಹಾಗೂ ಸದಸ್ಯರಿಗೂ ಅನುಕೂಲವಾಗುವ ರೀತಿಯಲ್ಲಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ಲೋಕೇಶ್ ಅವರು ತಿಳಿಸಿದರು.