More

    ಸೆ.27ರಿಂದ 4 ದಿನ ಕೇತಿಗಾನಹಳ್ಳಿ ತೋಟದಲ್ಲಿ ಜೆಡಿಎಸ್ ಬಲವರ್ಧನೆಗೆ ಕಾರ್ಯಾಗಾರ

    ಬಿಡದಿ (ರಾಮನಗರ): ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಬಲಗೊಳಿಸಲು ಸೆ.27ರಿಂದ 30ರ ವರೆಗೆ ಆಯೋಜಿಸಿರುವ ಕಾರ್ಯಾಗಾರಕ್ಕೆ ಬಿಡದಿಯ ಕೇತಿಗಾನಹಳ್ಳಿ ಎಚ್​ಡಿಕೆ ತೋಟದ ಮನೆ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

    ಶುಕ್ರವಾರ ಸಿದ್ಧತೆ ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಭಾಂಗಣ ಸ್ಥಳ, ಮಾಧ್ಯಮ ಕೇಂದ್ರ, ನೋಂದಣಿ ವಿಭಾಗ, ಊಟದ ವ್ಯವಸ್ಥೆ ಮತ್ತು ವಾಹನ ನಿಲುಗಡೆ ಸ್ಥಳಗಳನ್ನು ಪರಿಶೀಲಿಸಿದರು.

    ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಅಣಿಗೊಳಿಸಿ ಬಲವರ್ಧನೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಸೆ.27ರ ಸೋಮವಾರದಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸೇರಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ನಾಲ್ಕು ದಿನ ನಡೆಯುವ ಕಾರ್ಯಾಗಾರದಲ್ಲಿ ಪ್ರಾದೇಶಿಕತೆಗೆ ಒತ್ತು ನೀಡಿ ಪಕ್ಷ ಸಂಘಟಿಸುವುದು, ನನ್ನ ಕನಸಿನ ಐದು ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ರಾಜ್ಯದ ಜನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಪಕ್ಷದ ಮುಖಂಡರ ಜತೆ ರ್ಚಚಿಸಲಾಗುವುದು ಎಂದರು.

    ಸೆ.27, 28ರಂದು ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾಧ್ಯಕ್ಷರ ಜತೆ ಸಭೆ ನಡೆಯಲಿದೆ. 29ರ ಬುಧವಾರ ಮಹಿಳಾ ಮುಖಂಡರ ಸಭೆ ಹಾಗೂ ಅಂತಿಮ ದಿನವಾದ ಗುರುವಾರ ಯುವ ಘಟಕ ಮತ್ತು ವಿದ್ಯಾರ್ಥಿ ಘಟಕದ ಸಭೆ ನಡೆಯಲಿದೆ ಎಂದು ತಿಳಿಸಿದರು.

    ಮಕ್ಕಳೊಂದಿಗೆ ಪತ್ನಿ ನಾಪತ್ತೆ: ಆಕೆ ಸಿಗುತ್ತಿದ್ದಂತೆ ಪೊಲೀಸರಿಗೆ ಕಾದಿತ್ತು ಶಾಕ್​! ಗಂಡ-ಹೆಂಡ್ತಿಯಲ್ಲ, ಆದ್ರೆ…

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts