More

    ಪಾಕಿಸ್ತಾನ​ ಅಗ್ನಿಶಾಮಕ ವೇಷದಲ್ಲಿರೋ ಬೆಂಕಿ ಹಚ್ಚುವವ: ವಿಶ್ವಸಂಸ್ಥೆಯ ಪಾಕ್​ ಬಣ್ಣ ಬಯಲು ಮಾಡಿದ ಭಾರತ

    ನವದೆಹಲಿ: ಕಾಶ್ಮೀರ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಆಡಿದ ಮಾತಿಗೆ ಭಾರತದ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್​ಜಿಎ) ಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಾಕ್​ನ ಕರಾಳ ಮುಖವನ್ನು ಜಗತ್ತಿನ ಎದುರು ತೆರೆದಿಟ್ಟಿದ್ದಾರೆ.

    ಕಳೆದ ಆಗಸ್ಟ್​ ತಿಂಗಳಲ್ಲಿ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಿರುವ ಪಾಕ್​ ನಾಯಕನಿಗೆ ಪ್ರತ್ಯುತ್ತರ ನೀಡುವ ನಮ್ಮ ಹಕ್ಕನ್ನು ಇಂದು ಈ ವೇದಿಕೆಯಲ್ಲಿ ಚಲಾಯಿಸುತ್ತೇವೆ. ಪಾಕ್​ ಇಲ್ಲಿಯವರೆಗೂ ಜಾಗತಿಕ ವೇದಿಕೆಯಲ್ಲಿ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬರುತ್ತಿದೆ ಎಂದು ಸ್ನೇಹ ದುಬೆ ಹೇಳಿದರು.

    ಭಯೋತ್ಪಾದನೆಗೆ ಆಶ್ರಯ ತಾಣವಾಗಿರುವ ಪಾಕ್, ತಾನು​ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಏರಿಯಾಗಳಿಂದ ತಕ್ಷಣ ಖಾಲಿ ಮಾಡುವಂತೆ ನೆರೆಯ ದೇಶಗಳಿಗೆ ಬೆದರಿಕೆ ನೀಡುತ್ತಿದೆ ಮತ್ತು ಪಾಕ್​ ಅಗ್ನಿಶಾಮಕ ವೇಷದಲ್ಲಿರುವ ಬೆಂಕಿ ಹಚ್ಚುವವ ಎಂದು ಟೀಕಿಸಿದರು.

    ಮೊದಲೇ ರೆಕಾರ್ಡ್ ಮಾಡಲಾದ ಪಾಕ್​ ಪ್ರಧಾನಿ ಭಾಷಣವನ್ನು ಶುಕ್ರವಾರ ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಸಾರ ಮಾಡಲಾಯಿತು. ಅದರಲ್ಲಿ ಮಾತನಾಡಿರುವ ಇಮ್ರಾನ್​ ಖಾನ್​, 2019ರಲ್ಲಿ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದೆ. ಈ ಮೂಲಕ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆಯನ್ನು ಮಾಡಿದೆ ಎಂದು ಆರೋಪಿಸಿದರು.

    ಇದಕ್ಕೆ ಉತ್ತರ ನೀಡಿದ ಸ್ನೇಹ ದುಬೆ, ಈ ರೀತಿಯ ಹೇಳಿಕೆಗಳು ನಮ್ಮ ಸಾಮೂಹಿಕ ತಿರಸ್ಕಾರ ಮತ್ತು ಸಹಾನುಭೂತಿಗೆ ಅರ್ಹರಾಗಿರುವ ಪದೇ ಪದೇ ಸುಳ್ಳನ್ನು ಹೇಳುವ ವ್ಯಕ್ತಿಯ ಮನಸ್ಥಿತಿಯನ್ನು ತೊರುತ್ತದೆ ಎಂದರು. ವಿಸ್ವಸಂಸ್ಥೆ ನೀಡುವ ವೇದಿಕೆಯನ್ನು ಇದೇ ಮೊದಲ ಬಾರಿಗೆ ಅಲ್ಲ, ಹಲವಾರು ಬಾರಿ ಪಾಕಿಸ್ತಾನ ದುರ್ಬಳಕೆ ಮಾಡಿಕೊಂಡು ಭಾರತದ ವಿರುದ್ಧ ತನ್ನ ಕೊಳಕು ಯೋಜಿತ ಪ್ರಸಾರ ಮತ್ತು ಸುಳ್ಳುಗಳನ್ನು ಹರಡುತ್ತಿದೆ ಎಂದರು.

    ತನ್ನ ದೇಶದಲ್ಲಿ ಉಗ್ರರು ಎಂಜಾಯ್​ ಮಾಡುತ್ತಿದ್ದು, ಸಾಮಾನ್ಯ ಜನರಂತೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ವಿಶ್ವಕ್ಕೆ ಅಪಯಕಾರಿ ಸ್ಥಿತಿ ಪಾಕ್​ನಲ್ಲಿದ್ದು, ಅದನ್ನು ಮರೆಮಾಚಲು ವಿಶ್ವದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಾಡುತ್ತಿದ್ದಾರೆಂದು ಸ್ನೇಹಾ ದುಬೆ ಹೇಳಿದರು. ಇನ್ನೊಂದೆಡೆ ಭಾರತದ ಬಹುಸಂಖ್ಯಾತ ಪ್ರಜಾಪ್ರಭುತ್ವವು ಅಲ್ಪಸಂಖ್ಯಾತರ ಗಣನೀಯ ಜನಸಂಖ್ಯೆಯನ್ನು ಹೊಂದಿದ್ದು, ಅವರು ದೇಶದ ಅತ್ಯುನ್ನತ ಹುದ್ದೆಗಳನ್ನು ಹೊಂದಿದ್ದಾರೆಂದು ಹೇಳಿದರು.

    ಪಾಕಿಸ್ತಾನ ಉಗ್ರರಿಗೆ ಆಶ್ರಯ, ನೆರವು ಮತ್ತು ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಜಗತ್ತಿನ ಮುಂದೆಯೇ ಮುಕ್ತವಾಗಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕ್​, ಅವರಿಗೆ ತರಬೇತಿ, ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ಇಷ್ಟೆಲ್ಲ ಮಾಡಿದರೂ ವಿಶ್ವಸಂಸ್ಥೆಯ ಭಾಷಣದಲ್ಲಿ ಇಮ್ರಾನ್​ ಖಾನ್​ ಉಗ್ರರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾರೆಂದು ದೂರಿದರು.

    ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಹಾಗೇ ಲಡಾಖ್​ ಸೇರಿದಂತೆ ಇಡೀ ಕೇಂದ್ರಾಡಳಿತ ಪ್ರದೇಶವು ಎಂದಿಗೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿಯೇ ಉಳಿಯಲಿದೆ. ಪಾಕ್​ ಅಕ್ರಮವಾಗಿ ಆಕ್ರಮಿಸಿಕೊಂಡ ಭೂಭಾಗವೂ ಕೂಡ ಇದರಲ್ಲಿ ಸೇರಿಕೊಂಡಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಏರಿಯಾವನ್ನು ತಕ್ಷಣವೇ ಖಾಲಿ ಮಾಡುವಂತೆ ಸ್ನೇಹಾ ದುಬೆ ಕರೆ ಕೊಟ್ಟರು. (ಏಜೆನ್ಸೀಸ್​)

    ಬಾ ನಲ್ಲೆ ಮಧುಚಂದ್ರಕೆ ಫಿಲ್ಮ್​ ನೋಡಿ ಪತ್ನಿ ಹತ್ಯೆಗೆ ಸಂಚು: ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಗಂಡ!

    ಪ್ರೀತಿಸಿ ಮದ್ವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್! ಮನನೊಂದು ಗಂಡ ಆತ್ಮಹತ್ಯೆಗೆ ಶರಣು

    ನೆಟ್ಟಿಗರ ಮನಗೆದ್ದ ಬಾಲಕ: ಈ ನ್ಯೂಸ್​ಪೇಪರ್​ ಬಾಯ್​ ಮಾತು ಕೇಳಿದ್ರೆ ನೀವು ಶಹಬ್ಬಾಸ್ ಹೇಳೇ ಹೇಳ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts