ಉದ್ಯಮಿ ಮನೆ ದೋಚಿದ್ದ ಹೌಸ್ ಕೀಪಿಂಗ್ ಗ್ಯಾಂಗ್ ಸೆರೆ: 17ಕೆಜಿ ಬೆಳ್ಳಿಯ ಆಭರಣ, ದುಬಾರಿ ವಾಚು ವಶಕ್ಕೆ

House Keeping Gang
Published on

ಬೆಂಗಳೂರು: ಕೋರಮಂಗಳ 5ನೇ ಹಂತದಲ್ಲಿ ಉದ್ಯಮಿ ಮನೆಯಲ್ಲಿ ಕಳ್ಳತನಾಡಿದ್ದ ಹೌಸ್ ಕೀಪಿಂಗ್ ಗ್ಯಾಂಗ್ ಅನ್ನು 6 ತಾಸೀನಲ್ಲಿ ಬಂಧಿಸಿದ್ದಾರೆ.

ಬಿಹಾರ ಮೂಲದ ಚೂಟು ಕುಮಾರ್ (19), ರಂಜಿತ್ ಕುಮಾರ್ (19), ಗೌತಮ್ ಕುಮಾರ್ (20) ಮತ್ತು ಪಂಕಜ್ ಕುಮಾರ್ (19) ಬಂಧಿತರು. ಆರೋಪಿಗಳಿಂದ ದುಬಾರಿ ಬೆಲೆಯ 20ಲಕ್ಷ ಮೌಲ್ಯದ 17ಕೆಜಿ ಬೆಳ್ಳಿಯ ಆಭರಣ, ದುಬಾರಿ ಬೆಲೆಯ ವಾಚು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೋಟು ಕುಮಾರ್, ಉದ್ಯಮಿ ವರುಣ್ ಶಾ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಪೇಯಿಂಗ್ ಗೆಸ್ಟ್ ನಲ್ಲಿ ನೆಲೆಸಿದ್ದ. ಜತೆಗೆ ಸ್ನೇಹಿತರು ವಾಸವಿದ್ದರು. ಸ್ನೇಹಿತರ ಜತೆ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಉದ್ಯಮಿಗಳು ಹೊರಗಡೆ ಹೋಗಿದ್ದಾಗ ಚೋಟು ಕುಮಾರ್, ತನ್ನ ಸ್ನೇಹಿತರಿಗೆ ಮಾಹಿತಿ ಕೊಟ್ಟಿದ್ದ. ಅವರು ಬರುವ ವೇಳೆಗೆ ಸೆಕ್ಯುರಿಟಿ ಗಾಡ್೯ ಅನ್ನು ಮಲಗಿಸಿದ್ದ. ಆಗ ಆರೋಪಿಗಳು ಉದ್ಯಮಿ ಮನೆಯಲ್ಲಿದ್ದ ಬೆಳ್ಳಿ‌ ಮತ್ತು ವಾಚು ಕಳವು ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net