More

    ಮೊಲ ಸಾಕಾಣಿಕೆಯಿಂದ ಹಣ ಗಳಿಸಿ: ಮನಿಮಾತು

    ಮೊಲ ಸಾಕಾಣಿಕೆಯಿಂದ ಹಣ ಗಳಿಸಿ: ಮನಿಮಾತುಕೃಷಿಕರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರೆ ಬೇಸಾಯದ ಜತೆಗೆ ಉಪ ಕಸುಬುಗಳನ್ನೂ ಮಾಡಬೇಕು. ಮೊಲ ಸಾಕುವುದು ಒಂದು ಉತ್ತಮ ಉಪ ಕಸಬು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಾರರಿಗೆ ಅತಿ ಸೂಕ್ತ. ಮೊಲ ಸಾಕಾಣಿಕೆಗೆ ಹೆಚ್ಚು ನೀರು ಬೇಕಿಲ್ಲ, ಎಕರೆಗಟ್ಟಲೆ ಜಮೀನು ಬೇಕಿಲ್ಲ, ಹತ್ತಾರು ಕೂಲಿ ಆಳುಗಳ ಅಗತ್ಯವಿಲ್ಲ, ದೊಡ್ಡ ಬಂಡವಾಳ ಹೂಡಬೇಕಿಲ್ಲ, ನಿಮ್ಮ ಮನೆಯ ಆವರಣದಲ್ಲೇ ಮೊಲ ಸಾಕಬಹುದು. 10 ತಾಯಿ ಮೊಲಗಳನ್ನು ಸಾಕಿದರೆ ನೀವು ತಿಂಗಳಿಗೆ 5ರಿಂದ 6 ಸಾವಿರ ಸಂಪಾದನೆ ಮಾಡಬಹುದು. ದೊಡ್ಡ ಮಟ್ಟದಲ್ಲಿ ಮೊಲ ಸಾಕಾಣಿಕೆ ಮಾಡಿದರೆ ಲಕ್ಷಗಟ್ಟಲೆ ಗಳಿಕೆ ಸಾಧ್ಯವಿದೆ.

    ಮೊಲ- ತಳಿಗಳು: ನೂಜಿಲ್ಯಾಂಡ್ ವೈಟ್, ಸೋವಿಯಟ್ ಚಿಂಚಲಾ, ರಷ್ಯನ್ ಗ್ರೇ ಜೈಂಟ್, ವೈಟ್ ಜೈಂಟ್, ಕ್ಯಾಲಿಫೋರ್ನಿಯಾ ವೈಟ್, ಬ್ರಿಟಿಷ್ ಬ್ಲಾ್ಯಕ್, ನ್ಯೂಜಿಲೆಂಡ್ ಬ್ಲಾ್ಯಕ್, ಜರ್ಮನ್ ಅಂಗೋರಾ, ರಷ್ಯನ್ ಅಂಗೋರಾ, ಫ್ರೆಂಚ್ ಅಂಗೋರಾ, ಬ್ರಿಟಿಷ್ ಅಂಗೋರಾ, ಅಲ್ಬಿನೋ ಹೀಗೆ ಹಲವು ತಳಿಗಳಿವೆ. ಮೊಲಗಳನ್ನು ಉಣ್ಣೆ ಮತ್ತು ಚರ್ಮಕ್ಕಾಗಿ ಇಲ್ಲವೇ ಮಾಂಸಕ್ಕಾಗಿ ಸಾಕಾಣಿಕೆ ಮಾಡಬಹುದು.

    ಮೊಲ ಸಾಕುವ ವಿಧಾನ: ತಾಯಿ ಮೊಲದ ಗರ್ಭಧಾರಣೆ ಸಮಯ ಕೇವಲ 30 ದಿನಗಳು. ಹೆಣ್ಣು ಮೊಲ ವರ್ಷಕ್ಕೆ ಕನಿಷ್ಠ ಐದಾರು ಬಾರಿ ಮರಿ ಹಾಕುತ್ತದೆ. ಪ್ರತಿ ಬಾರಿಯೂ 5ರಿಂದ 12 ಮರಿಗಳನ್ನು ಇಡುತ್ತದೆ. ಮರಿಗಳು ಹುಟ್ಟಿದ ನಂತರ 100ರಿಂದ 120 ದಿನಗಳಲ್ಲಿ ಬೆಳೆದು ದೊಡ್ಡದಾಗುತ್ತವೆ ಹಾಗೂ ಕನಿಷ್ಠ 2 ರಿಂದ 3 ಕೆ.ಜಿ. ತೂಗುತ್ತವೆ. ಮೊಲ ಸಾಕಾಣಿಕೆ ಒಂದು ರೀತಿಯಲ್ಲಿ ಎರಡ್ಮೂರು ತಿಂಗಳಿಗೊಂದು ಬೆಳೆ ತೆಗೆದಂತೆ. ವರ್ಷದಲ್ಲಿ ನಾಲ್ಕೈದು ಬಾರಿ ಆದಾಯ ಸಿಗುತ್ತದೆ.

    ಮೊಲ- ಆಹಾರ ಮತ್ತು ಆರೈಕೆ: ಮೊಲ ಸಸ್ಯಾಹಾರಿ ಪ್ರಾಣಿಯಾಗಿದ್ದು, ನುಗ್ಗೆ ಸೊಪ್ಪು, ಗರಿಕೆ, ಅನುಪಯುಕ್ತ ತರಕಾರಿ, ಹುಲ್ಲು, ಗಜ್ಜರೆ ತೊಪ್ಪಲು, ಸುಬಾಬುಲ್, ಬೊಗಜಿ, ರೇಷ್ಮೆ ಸೊಪ್ಪು, ಕುದುರೆ ಮೆಂತೆ ಸೊಪ್ಪು ಕೊಡಬಹುದು. ಟೊಮಾಟೋ, ಈರುಳ್ಳಿ, ಬದನೆಕಾಯಿ ಇತ್ಯಾದಿಗಳನ್ನು ಕೊಡಬಾರದು. ಇನ್ನು ಒಂದು ದೊಡ್ಡ ಮೊಲಕ್ಕೆ ದಿನಕ್ಕೆ ಕನಿಷ್ಠ 500 ಗ್ರಾಂನಷ್ಟು ಕೈ ತಿಂಡಿಯನ್ನು ಕೊಡಬೇಕು. ಗೋಧಿ ಬೂಸಾ, ಮುಸುಕಿನ ಜೋಳ, ಅಕ್ಕಿ, ಅವಲಕ್ಕಿ ನುಚ್ಚು, ರಾಗಿ, ಅವರೆ, ಅಲಸಂದೆ, ಹುರುಳಿಯನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಬೇಕು.

    ಮೊಲದ ಮಾಂಸಕ್ಕೆ ಬೇಡಿಕೆ: ಮೊಲದ ಮಾಂಸ ಉತ್ಕೃಷ್ಟವಾದುದು. ಕುರಿ, ಕೋಳಿಗಳ ಮಾಂಸದಂತೆ ಇದರಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇರುವುದಿಲ್ಲ. ಮೊಲದ ಮಾಂಸ ಎಲ್ಲ ವಯಸ್ಸಿನವರಿಗೂ ಆರೋಗ್ಯಕರ ಎಂದು ತಜ್ಞರು ಹೇಳುತ್ತಾರೆ, ಮೊಲದ ರಕ್ತ ಮತ್ತು ಚರ್ಮಕ್ಕೆ ದುಬಾರಿ ಬೆಲೆ ಇದೆ.

    ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮೊಲ ಸಾಕಾಣಿಕೆ ಕೋರ್ಸ್: ಮೊಲ ಸಾಕಾಣಿಕೆ ಮಾಡುವವರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮೊಲ ಸಾಕಾಣಿಕೆ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಮೊಲ ಸಾಕಾಣಿಕೆ ಮಾಡಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಸಿ.ಎನ್. ಸುಧೀಂದ್ರ ರೆಡ್ಡಿಯವರು ಈ ಕೋರ್ಸ್​ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಮೊಲ ಸಾಕಾಣಿಕೆಗೆ ಸಂಬಂಧಿಸಿದಂತೆ ಪರಿಪೂರ್ಣ ಮಾಹಿತಿ ಇದರಲ್ಲಿದೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಮತ್ತು ಮೊಲ ಸಾಕಾಣಿಕೆ ಕೋರ್ಸ್ ನೋಡಿ ನಿಮ್ಮ ಆದಾಯ ಹೆಚ್ಚಳಕ್ಕೆ ದಾರಿ ಕಂಡುಕೊಳ್ಳಿ.

    ಕೃಷಿ ಸಂಬಂಧಿತ ಉಪ ಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್​ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೋರ್ಸ್​ಗಳಿವೆ.

    ಕೃಷಿ ಕೋರ್ಸ್​ಗಳು: ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂ›ಟ್ ಕೋರ್ಸ್, ರಂಬುಟಾನ್ ಕೋರ್ಸ್, ಬಟರ್ ಫೂ›ಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್​ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್​ಗಳಿವೆ.

    ಇಲ್ಲಿದೆ ಕೃಷಿ ಯೂನಿವರ್ಸಿಟಿ: ಕೃಷಿಯಲ್ಲಿ ಸಾಧನೆ ಮಾಡಬೇಕು ಅಂದ್ರೆ ಹೊಸ ಕಲಿಕೆ ನಿಮ್ಮದಾಗಬೇಕು. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಲವು ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಕೃಷಿ ಉಪಕಸುಬುಗಳ ಮಾಹಿತಿಯ ಕಣಜವೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ.

    ಸಾಕಾಣಿಕೆ ಕೋರ್ಸ್​ನಲ್ಲಿ ಏನಿದೆ ಮಾಹಿತಿ?

    • ಕೋರ್ಸ್​ನ ಪರಿಚಯ
    • ಮಾರ್ಗದರ್ಶಕರ ಪರಿಚಯ
    • ಮೊಲ ಸಾಕಾಣಿಕೆಗೆ ಅಗತ್ಯ ಬಂಡವಾಳ
    • ಮೊಲ ಸಾಕಾಣಿಕೆ- ಜಾಗದ ಅವಶ್ಯಕತೆ
    • ಮೊಲ ಸಾಕಾಣಿಕೆಗೆ ಸರ್ಕಾರದ ಸವಲತ್ತುಗಳು
    • ಮೊಲ ಸಾಕಾಣಿಕೆ ಶೆಡ್ ವಿನ್ಯಾಸ
    • ಮೊಲ ಸಾಕಾಣಿಕೆಗೆ ತಗಲುವ ವೆಚ್ಚ
    • ಮೊಲ ಸಾಕಾಣಿಕೆ – ಆಹಾರ ಮತ್ತು ನೀರಿನ ಅಗತ್ಯತೆ
    • ಮೊಲ ಸಾಕಾಣಿಕೆ – ಸಾಮಾನ್ಯ ರೋಗಗಳು ಮತ್ತು ಔಷಧಿ
    • ಮೊಲ ಸಾಕಾಣಿಕೆ – ಮಾರುಕಟ್ಟೆ ಕಂಡುಕೊಳ್ಳೋದು ಹೇಗೆ?
    • ಮೊಲ ಸಾಕಾಣಿಕೆಯಲ್ಲಿರುವ ಆದಾಯ
    • ಮೊಲ ಸಾಕಾಣಿಕೆಗೆ ಕಾರ್ವಿುಕರ ಅವಶ್ಯಕತೆ
    • ಮಾರ್ಗದರ್ಶಕರ ಕಿವಿಮಾತು

    ಮೊಲ ಸಾಕಾಣಿಕೆಯಿಂದ ಹಣ ಗಳಿಸಿ: ಮನಿಮಾತು

    ಶ್ರುತಿಗೆ ಶಾಕ್, ಕಾಪುಸಿಗೆ ಮಣೆ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts