

ಬೆಂಗಳೂರು: ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ ಎಂದು ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ಕಿಂಗ್ಪಿನ್ ಸನಾಬೇಡಿ ವಿಚಾರಣೆ ವೇಳೆ ಅಧಿಕಾರಿಗಳ ಬಳಿ ಕಣ್ಣೀರಿಟ್ಟರು.
ಒಳ್ಳೆಯ ಕೆಲಸ ಸಿಕ್ಕಿತು. ಮದುವೆ ಮಾಡಬೇಕೆಂದು ಕುಟುಂಬಸ್ಥರು ತಯಾರಿ ನಡೆಸಿದ್ದರು. ಇದೇ ಸಮದಲ್ಲಿ ನಂಬಿದ್ದ ಸ್ನೇಹಿತನ ಮಾತು ಕೇಳಿಕೊಂಡು ಲೈಫ್ ಹಾಳು ಮಾಡಿಕೊಂಡೆ ಎಂದು ಸನಾ ದುಃಖಿತರಾದರು.
ಪೆನ್ಡ್ರೈವ್ನಲ್ಲಿ ಕಾಪಿ ಮಾಡಿಕೊಡು ಎಂದು ಸ್ನೇಹಿತ ರಮೇಶ್ ಕೇಳಿದ. ಆದ್ರೆ ಈ ರೀತಿಯಾಗುತ್ತದೆ ಎಂದು ನನ್ನ ಅರಿವಿಗೇ ಬರಲಿಲ್ಲ. ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಬೇಕೆಂದು ಉದ್ದೇಶವೂ ನನಗೆ ಇರಲಿಲ್ಲ. ಸ್ನೇಹಿತ ರಮೇಶ್ ಮಾತು ನಂಬಿ ಪ್ರಶ್ನೆಪತ್ರಿಕೆಗೆ ಪೆನ್ಡ್ರೈವ್ಗೆ ಹಾಕಿ ಕೊಟ್ಟೆ ಎಂದು ಅಧಿಕಾರಿಗಳ ಬಳಿ ಸನಾಬೇಡಿ ಗೋಳಾಡಿದ್ದಾಳೆ.
ಸದ್ಯ ರಮೇಶ್, ಚಂದ್ರು ಹಾಗೂ ರಾಚಪ್ಪನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಚಂದ್ರು ಮತ್ತು ರಾಚಪ್ಪ ಬೇರೆ ಯಾವ ಅಭ್ಯರ್ಥಿಗಳ ಸಂಪರ್ಕ ಮಾಡಿದರು ಎಂಬ ತನಿಖೆ ನಡೆಸುತ್ತಿದೆ. ರಾಚಪ್ಪ ಸಂಪರ್ಕಿತ ಕೆಲ ಅಭ್ಯರ್ಥಿಗಳ ಪೋನ್ ಸ್ವಿಚ್ ಆಫ್ ಬರ್ತಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)