More

    ಹೊಸ ಗೌಪ್ಯತಾ ನೀತಿ ಘೋಷಣೆ ಬಳಿಕ ವ್ಯಾಟ್ಸ್​ಆ್ಯಪ್​ಗೆ ಗುಡ್​ಬೈ ಹೇಳಿದವರೆಷ್ಟು? ಇಲ್ಲಿದೆ ಮಾಹಿತಿ

    ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು ಹೊರತಂದ ಬಳಿಕ ವಾಟ್ಸ್​ಆ್ಯಪ್​ ವಿರುದ್ಧ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಅನೇಕರು ವಾಟ್ಸ್​ಆ್ಯಪ್​ಗೆ ಕೈಮುಗಿದು ಸಿಗ್ನಲ್​, ಟೆಲಿಗ್ರಾಮ್​ ಕಡೆಗೆ ಮುಖಮಾಡಿದ್ದಾರೆ.

    ತಮ್ಮ ಗೌಪ್ಯ ಮಾಹಿತಿ ಅಪಾಯದಲ್ಲಿದೆ ಎಂಬ ಆತಂಕದಿಂದ ಬಳಕೆದಾರರು ಬೇರೆ ಕಡೆ ಗಮನಹರಿಸಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ವಾಟ್ಸ್​ಆ್ಯಪ್​ ಸ್ವತಃ ಸ್ಟೇಟಸ್​ ಹಾಕಿ ನಿಮ್ಮ ಗೌಪ್ಯತೆಗೆ ನಾವು ಬದ್ಧ ಎಂದು ಹೇಳಿತ್ತು. ಆದರೂ ಅನೇಕರು ಈಗಾಗಲೇ ಬೇರೆ ಆಯ್ಕೆ ಮಾಡಿದ್ದಾರೆ. ಹೀಗಾಗಿ ಭಾರತದಲ್ಲಿ ಎಷ್ಟು ಮಂದಿ ವಾಟ್ಸ್​ಆ್ಯಪ್​ ಡಿಲೀಟ್​ ಮಾಡಿದ್ದಾರೆ ಎಂಬುದರ ಸಮೀಕ್ಷೆಯು ಸಹ ನಡೆದಿದೆ.

    ಆನ್​ಲೈನ್​ ಮೂಲಕ ನಡೆದ ಈ ಸರ್ವೆಯಲ್ಲಿ ದೇಶಾದ್ಯಂತ ಸುಮಾರು 17 ಸಾವಿರ ಮಂದಿ ಪಾಲ್ಗೊಂಡಿದ್ದರು. ಈವರೆಗೂ ಕೇವಲ ಶೇ. 5 ರಷ್ಟು ಭಾರತೀಯರು ಆ್ಯಪ್​ ಡಿಲೀಟ್​ ಮಾಡಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಒಟ್ಟು 40 ಕೋಟಿ ವಾಟ್ಸ್​ಆ್ಯಪ್​ ಬಳಕೆದಾರರಿದ್ದಾರೆ. ಸುಮಾರು 2 ಕೋಟಿ ಮಂದಿ ವಾಟ್ಸ್​ಆ್ಯಪ್ ಖಾತೆಯನ್ನು​ ಡಿಲೀಟ್​ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

    ಇಷ್ಟೇ ಅಲ್ಲದೆ, ಶೇ. 21 ಮಂದಿ ವಾಟ್ಸ್​ಆ್ಯಪ್​ ಬಳಕೆಯನ್ನು ತಗ್ಗಿಸಿ, ಸಿಗ್ನಲ್​ ಮತ್ತು ಟೆಲಿಗ್ರಾಮ್​ನಂತಹ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಶೇ. 22 ರಷ್ಟು ಮಂದಿ ವಾಟ್ಸ್​ಆ್ಯಪ್​ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ, ತಮ್ಮ ಖಾತೆಯನ್ನು ಡಿಲೀಟ್​ ಮಾಡಿಲ್ಲ.

    ಹೊಸ ಗೌಪ್ಯತಾ ನೀತಿಯಿಂದ ವಾಟ್ಸ್​ಆ್ಯಪ್​ಗೆ ತೀವ್ರ ಹೊಡೆತ ಬಿದ್ದಂತಾಗಿದೆ. ವಾಟ್ಸ್​ಆ್ಯಪ್​ ಡೇಟಾವನ್ನು ಫೇಸ್​ಬುಕ್​ ಅಥವಾ ಮೂರನೇ ಪಾರ್ಟಿಗಾಗಲಿ ಶೇರ್​ ಮಾಡಿದರೆ, ವಾಟ್ಸ್​ಆ್ಯಪ್​ ಅನ್ನು ಬಳಸುವುದೇ ಇಲ್ಲ ಎಂದು ಅನೇಕರು ತಮ್ಮ ಅಭಿಪ್ರಾಯಗಳನ್ನು ಸಮೀಕ್ಷೆ ವೇಳೆ ಮಂಡಿಸಿದ್ದಾರೆ. ಶೇ. 92 ರಷ್ಟು ಮಂದಿ ಇದನ್ನೇ ಹೇಳಿದ್ದಾರೆ. 79 ರಷ್ಟು ವಾಟ್ಸ್​ಆ್ಯಪ್​ ಬಿಸಿನೆಸ್​ ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ವಾಟ್ಸ್​ಆ್ಯಪ್​ ಅನ್ನು ಪರ್ಯಾಯ ಆ್ಯಪ್​ ಆಗಿ ಡೌನ್​ಲೋಡ್​ ಮಾಡಿಕೊಂಡಿರುವುದಾಗಿ ಶೇ. 55ರಷ್ಟು ಮಂದಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts