ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲಿವೇಟೆಡ್​ ವಾಕ್​ವೇ ಸೌಲಭ್ಯ ಅನುಷ್ಠಾನ

Walkway
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಎಲಿವೇಟೆಡ್​ ವಾಕ್​ವೇ ಸೌಲಭ್ಯವನ್ನು ಆರಂಭಿಸಲಾಗಿದೆ.

ಆಧುನಿಕ ವಿನ್ಯಾಸದೊಂದಿಗೆ, ಎಲಿವೇಟರ್​ ಮತ್ತು ಎಸ್ಕಲೇಟರ್​ಗಳಂತಹ ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ನೀಡಲಾಗಿದ್ದು, ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕ ನಡಿಗೆಯ ಅನುಭವ ಪಡೆಯಬಹುದು. ನೂತನ ವಾಕ್​ವೇ ರ್ಟಮಿನಲ್​ 1 ರಿಂದ ಪಾರ್ಕಿಂಗ್​ 4 ಅನ್ನು ಸಂಪರ್ಕಿಸಲಿದೆ.

ಹಿರಿಯ ನಾಗರಿಕರಿಗೆ ಇದು ಹೆಚ್ಚು ಸಹಕಾರಿಯಾಗಲಿದ್ದು, 420 ಮೀ. ವಾಕ್​ವೇಯನ್ನು ವಿನ್ಯಾಸಗೊಳಿಸಲಾಗಿದೆ. ಕಾಲ್ನಡಿಗೆಯಲ್ಲಿ ಸುರತ ಪಾದಚಾರಿ ಕಾರಿಡಾರ್​ ಮತ್ತು ರಾತ್ರಿಯಿಡೀ ಸುರತ ವಾತಾವರಣವನ್ನು ಹೊಂದಿದೆ. ನೂತನ ವ್ಯವಸ್ಥೆಯು ಎಲ್ಲಾ ಹವಾಮಾನ ಪರಿಸ್ಥಿತಿಗೂ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net