ಏಷ್ಯಾಕಪ್​-ವಿಶ್ವಕಪ್​ ಪಂದ್ಯಗಳನ್ನು ಈ ಆ್ಯಪ್​ ಮೂಲಕ ಮೊಬೈಲ್​ನಲ್ಲೇ ಉಚಿತವಾಗಿ ವೀಕ್ಷಿಸಬಹುದು…

asia world web
Published on

ಬೆಂಗಳೂರು: ಮುಂಬರುವ ಏಕದಿನ ಏಷ್ಯಾಕಪ್​ ಮತ್ತು ವಿಶ್ವಕಪ್​ ಟೂರ್ನಿಗಳೊಂದಿಗೆ ಮೂರು ತಿಂಗಳ ಕಾಲ ಭರ್ಜರಿ ಕ್ರಿಕೆಟ್​ ಮನರಂಜನೆಗೆ ವೇದಿಕೆ ಸಜ್ಜಾಗುತ್ತಿದೆ. ಈ ನಡುವೆ ಕ್ರಿಕೆಟ್​ ಪ್ರೇಮಿಗಳು ಎಲ್ಲ ಪಂದ್ಯಗಳನ್ನು ಮೊಬೈಲ್​ನಲ್ಲೇ ಉಚಿತವಾಗಿ ವೀಕ್ಷಿಸುವ ಅವಕಾಶವನ್ನೂ ಹೊಂದಿದ್ದಾರೆ. ಹಾಗಾದರೆ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕೇ? ಈ ಸ್ಟೋರಿ ಓದಿ...

ಏಷ್ಯಾಕಪ್​ ಮತ್ತು ವಿಶ್ವಕಪ್​ ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಸ್ಟಾರ್​ ಸ್ಪೋರ್ಟ್ಸ್​ ವಾಹಿನಿ ಪಡೆದುಕೊಂಡಿದೆ. ಜತೆಗೆ ಇವೆರಡು ಟೂರ್ನಿಗಳ ಎಲ್ಲ ಪಂದ್ಯಗಳನ್ನು ಡಿಸ್ನಿ+ ಹಾಟ್​ಸ್ಟಾರ್​ ಮೂಲಕ ಒಟಿಟಿಯಲ್ಲೂ ನೇರಪ್ರಸಾರ ಮಾಡಲು ಸಜ್ಜಾಗಿದೆ. ಕಳೆದ ಐಪಿಎಲ್​ ಸಮಯದಲ್ಲಿ ಜಿಯೋಸಿನಿಮಾ ಆ್ಯಪ್​ ಮೂಲಕ ವಯಾಕಾಮ್​18 ಎಲ್ಲ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರ ಮಾಡಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಇದೀಗ ಡಿಸ್ನಿ+ ಹಾಟ್​ಸ್ಟಾರ್​ ಕೂಡ ಉಚಿತವಾಗಿ ಪ್ರಸಾರ ಮಾಡಲು ಸಜ್ಜಾಗಿದೆ. ಆದರೆ ಇದಕ್ಕೆ ಒಂದು ಷರತ್ತು ಕೂಡ ಅನ್ವಯಿಸುತ್ತಿದೆ.

ಕ್ರಿಕೆಟ್​ ಪ್ರೇಮಿಗಳು ಮೊಬೈಲ್​ ಮೂಲಕ ಮಾತ್ರ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಏಷ್ಯಾಕಪ್​ ಮತ್ತು ವಿಶ್ವಕಪ್​ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದೇ ಆ್ಯಪ್​ ಮೂಲಕ ಲ್ಯಾಪ್​ಟಾಪ್​ ಅಥವಾ ಟಿವಿ ಸಹಿತ ಇತರ ಬಿಗ್​ ಸ್ಕ್ರೀನ್​ಗಳಲ್ಲಿ ವೀಸಲು ಬಯಸುವುದಾದರೆ ಆಗ ಉಚಿತವಾಗಿ ವೀಕ್ಷಿಸಲು ಅವಕಾಶವಿರುವುದಿಲ್ಲ. ಆಗ ನಿಗದಿತ ಶುಲ್ಕ ಪಾವತಿಸಿ ಸಬ್​ಸ್ಕ್ರಿಪ್ಷನ್​ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ.

ಅಂದಹಾಗೆ ಏಷ್ಯಾಕಪ್​ ಟೂರ್ನಿ ಆಗಸ್ಟ್​ 30ರಂದು ಆರಂಭಗೊಳ್ಳಲಿದ್ದರೆ, ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ಭಾರತದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net