

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜ್ಞಾನ ದೀಪ ಧರ್ಮಸ್ಥಳ ವತಿಯಿಂದ ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಚ್, ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಒಕ್ಕೂಟಗಳ ಸೇವಾ ಪ್ರತಿನಿಧಿ ಶಾರದಾ ಕೊಡುಗೆ ಹಸ್ತಾಂತರಿಸಿದರು. ಎಸ್‌ಎಂಸಿ ಅಧ್ಯಕ್ಷ ಬಾಲಕೃಷ್ಣ ಭಟ್ ಸಾಲೆ, ಎಸ್‌ಎಸ್‌ಜಿ ಅಧ್ಯಕ್ಷ ಬಟ್ಯ ಮಾಸ್ಟರ್, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ರಾಜೇಶ ಬಿ ಸ್ವಾಗತಿಸಿದರು. ಅಧ್ಯಾಪಕ ಮಹಮ್ಮದ್ ಪೈಝಲ್ ವಂದಿಸಿದರು.