ಬಿ.ಸಿ.ರೋಡ್- ಮಲ್ಲೂರು ರಸ್ತೆಯ ದೆಮ್ಮಲೆ ತಾಲೊಂಟು ಬಳಿ ಟಿಪ್ಪರ್ ಡಿಕ್ಕಿ ವೃದ್ಧ ಮೃತ್ಯು

accident-15
Published on

ಮಂಗಳೂರು: ಬಿ.ಸಿ.ರೋಡ್- ಮಲ್ಲೂರು ರಸ್ತೆಯ ದೆಮ್ಮಲೆ ತಾಲೊಂಟು ಬಳಿ ಗುರುವಾರ ಸಂಜೆ ಟಿಪ್ಪರ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವೃದ್ಧ ಮೃತಟ್ಟಿದ್ದಾರೆ.

ಎಂ.ಪಿ.ಮೊಹಮ್ಮದ್ (84) ಮೃತರು. ಟಿಪ್ಪರನ್ನು ಚಾಲಕ ದುಡುಕು ತನದಿಂದ ಚಲಾಯಿಸಿಕೊಂಡು ಬಂದು ದೆಮ್ಮಲೆ ತಾಲೊಂಟು ಕಡೆಗೆ ಸಾಗುವ ಇಳಿಜಾರು ರಸ್ತೆಯ ಒಳರಸ್ತೆಯ ಬದಿಯಲ್ಲಿ ದಿ. ಡಾ. ಸೂರಜ್ ಶೆಟ್ಟಿ ಎನ್ನುವವರ ಮನೆಯ ಮುಂದೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೊಹಮ್ಮದ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಟಿಪ್ಪರನ್ನು ಸ್ವಲ್ಪ ದೂರದ ವರೆಗೆ ತೆಗೆದುಕೊಂಡು ಹೋಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದಿಂದ ಮೊಹಮ್ಮದ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕಾಲಿನ ಮೊಣಗಂಟಿಗೆ, ಎಡಕೈ ಮೊಣಗಂಟಿಗೆ ರಕ್ತಗಾಯವಾಗಿ ಪ್ರಜ್ಞಾಹೀನರಾಗಿದ್ದು, ಕೂಡಲೇ ಅವರನ್ನು ನೀರುಮಾರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರೀಕ್ಷಿಸಿದ ವೈದ್ಯರು ಮೊಹಮ್ಮದ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net