ದನ ಕಾಯೋಕೆ ಹೋಗಿ... ವೈದ್ಯರಿಗೆ ಸಚಿವ ಸುಧಾಕರ್​ ಹಿಗ್ಗಾಮುಗ್ಗಾ ತರಾಟೆ

sudhakar
Published on

ಬೆಳಗಾವಿ: ಎಲ್ಲಿಯಾದರೂ ದನ ಕಾಯೋಕೆ ಹೋಗಿ ಎಂದು ರೋಗಿಗಳ ಎದುರಲ್ಲೇ ಬಿಮ್ಸ್ ವೈದ್ಯರಿಗೆ ಸಚಿವ ಡಾ.ಸುಧಾಕರ್​ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದ ಬಳಿಕ ಜಿಲ್ಲಾ ಆಸ್ಪತ್ರೆಯ ವಾರ್ಡ್​ಗಳಲ್ಲಿ ಸಂಚರಿಸಿದ ಸಚಿವರು ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಕೆಲ ರೋಗಿಗಳು, ಸಮಯಕ್ಕೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ಸ್ವಚ್ಛತೆ ಇಲ್ಲ. ಆಸ್ಪತ್ರೆಯಲ್ಲಿ ವಿಪರೀತ ಸೊಳ್ಳೆ ಕಾಟ ಇದೆ ಸರ್... ಎನ್ನುತ್ತ ಗೋಳಾಡಿದರು.

ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ರೋಗಿಗಳು ದೂರಿನ ಸುರಿಮಳೆ ಸುರಿಸುತ್ತಿದ್ದಂತೆ ಕೆಂಡಾಮಂಡಲವಾದ ಸಚಿವ ಸುಧಾಕರ್​, ಆಸ್ಪತ್ರೆ ಸಿಬ್ಬಂದಿ ಮತ್ತು ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ಹಾಗೂ ವೈದ್ಯರ ವಿರುದ್ಧ ಹರಿಹಾಯ್ದರು.

ಸ್ವಚ್ಛತೆಗಾಗಿ ಪ್ರತಿ ತಿಂಗಳು 6 ಲಕ್ಷ ರೂ. ಹಣ ಖರ್ಚು ಮಾಡುತ್ತೇವೆ. ಆದರೂ ಕ್ಲೀನಿಂಗ್ ಇಲ್ಲ ಅಂದ್ರೆ ಹೇಗೆ? ನಿಮ್ಮನ್ನೇ ಬೇರೆ ಕಡೆ ಕಳುಹಿಸಿ ಕೊಡ್ಲಾ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net