ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ

ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನವನ್ನು ಅಡವೀಶ್ವರ ದೇವರು ಉದ್ಘಾಟಿಸಿದರು. ಮುರುಂದ್ರ ಸ್ವಾಮೀಜಿ, ನಿರಂಜನದೇವರು, ಪ್ರಾಚಾರ್ಯ ಎಂ.ಎಚ್​.ಪಾಟೀಲ ಇತರರಿದ್ದರು.
ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನವನ್ನು ಅಡವೀಶ್ವರ ದೇವರು ಉದ್ಘಾಟಿಸಿದರು. ಮುರುಂದ್ರ ಸ್ವಾಮೀಜಿ, ನಿರಂಜನದೇವರು, ಪ್ರಾಚಾರ್ಯ ಎಂ.ಎಚ್​.ಪಾಟೀಲ ಇತರರಿದ್ದರು.
Published on
ಮುನವಳ್ಳಿ: ವಿದ್ಯಾರ್ಥಿಗಳು ಉತ್ತಮ ಶಿಣದ ಜತೆಗೆ ಸಂಸ್ಕಾರ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾರಿಹಾಳ ಅಡವಿಸಿದ್ಧೇಶ್ವರಮಠದ ಅಡವೀಶ್ವರ ದೇವರು ಹೇಳಿದರು.
ಪಟ್ಟಣದ ಮುರುರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸವದತ್ತಿ ಬಿಇಒ ಎ.ಎ.ಖಾಜಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶ್ರೀಮಠದ ಶಿಣ ಸಂಸ್ಥೆ ವರದಾನವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಮುಗಳಿಹಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ ಐ.ಜಿ.ಸುಬ್ಬಾರಪುರಮಠ ಮಾತನಾಡಿದರು. ಸಂಸ್ಥೆಯ ಅಧ್ಯ ಸೋಮಶೇಖರ ಮಠದ ಮ.ನಿ.ಪ್ರ ಮುರುಂದ್ರ ಸ್ವಾಮೀಜಿ, ಮೈಸೂರಿನ ನಿರಂಜನದೇವರು, ತೆಗ್ಗಿಹಾಳ ಗ್ರಾಪಂ ಅಧ್ಯ ಹನಮಂತ ಸಿಂಗನ್ನವರ, ಮಬನೂರ ಗ್ರಾಮದ ರಾಮಚಂದ್ರ, ಮಲ್ಲಿಕಾರ್ಜುನ ಜಮಖಂಡಿ, ಶಂಕರ ಗಯ್ಯಾಳಿ, ಗಂಗಮ್ಮ ಸಂಕಣ್ಣವರ, ವಿಜಯಲಕ್ಷಿ$್ಮ ಗೊರಾಬಾಳ, ಪ್ರಾಚಾರ್ಯ ಎಂ.ಎಚ್​.ಪಾಟೀಲ, ಕೆ.ಬಿ.ನಲವಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net