ಭಿಕ್ಷೆ ಬೇಡಿ ಫುಟ್​ಪಾತ್​ನಲ್ಲಿ ಮಲಗುತ್ತಿದ್ದ ಅಪರಿಚಿತ ಮಹಿಳೆ ಮೇಲೆ ಕಾಮುಕರ ಅಟ್ಟಹಾಸ

Murder
Published on

ಮಂಡ್ಯ: ಫುಟ್​ಪಾತ್​ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯನ್ನೂ ಬಿಡದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ನಗರದ ಬಾಟಾ ಶೋ ರೂಮ್​ ಬಳಿ ಘಟನೆ ನಡೆದಿದೆ. ಪ್ರತಿ ದಿನ ಭಿಕ್ಷೆ ಬೇಡಿ ಮಹಿಳೆ ಅಲ್ಲಿಯೇ ಮಲಗುತ್ತಿದ್ದಳು. ದುಷ್ಕರ್ಮಿಗಳು ನಿನ್ನೆ ರಾತ್ರಿ ಅತ್ಯಾಚಾರ ಗೈದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಹಾಗೂ ಡಿವೈಎಸ್​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net