ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!

doddamma kariyamma tempal
Published on

ಮೈಸೂರು: ದೇವರು ಎಂದಾಕ್ಷಣ ಮನದಲ್ಲಿ ಭಕ್ತಿ ಮೂಡಲಿದೆ. ದುಷ್ಟರಿಂದ ನಮ್ಮನ್ನು ರಕ್ಷಿಸು ದೇವರೆ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಅಂತಹ ಶಿಷ್ಟ ಶಕ್ತಿಯ ಮೇಲೆಯೇ ದುಷ್ಟರು ತಮ್ಮ ಕೈಚಳಕ ತೋರಿದ್ದಾರೆ.

ಹೌದು, ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಶಕ್ತಿದೇವತೆಗಳಾದ ದೊಡ್ಡಮ್ಮ ಮತ್ತು ಕರಿಯಮ್ಮ ದೇವಿಯ ಬೆಳ್ಳಿ ವಿಗ್ರಹಗಳನ್ನೇ ಕಳ್ಳರು ದೋಚಿದ್ದಾರೆ.

ಭೇರ್ಯ ಗ್ರಾಮದ ದೇಗುಲಕ್ಕೆ ಐದು ತಿಂಗಳ ಹಿಂದಷ್ಟೇ ದೊಡ್ಡಮ್ಮ ಮತ್ತು ಕರಿಯಮ್ಮ ದೇವರ ತಲಾ ಅರ್ಧ ಕೆ.ಜಿ. ತೂಕದ ಎರಡು ಬೆಳ್ಳಿ ಮುಖವಾಡಗಳನ್ನು ಭಕ್ತರು ಮಾಡಿಸಿಕೊಟ್ಟಿದ್ದರು. ನಿನ್ನೆ(ಗುರವಾರ)ರಾತ್ರಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ದೊಡ್ಡಮ್ಮ ದೇವಿ, ಕರಿಯಮ್ಮ ದೇವಿಯ ಬೆಳ್ಳಿ ಮುಖವಾಡದ ಎರಡೂ ವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದಾರೆ.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net