ಮಹಿಳೆಯರಿಗೆ ಉದ್ಯೋಗಕ್ಕೂ ಅವಕಾಶ ನೀಡಿ: ಶ್ರದ್ಧಾ ಸಲಹೆ

rudset
ರುಡ್‌ಸೆಟ್ ವತಿಯಿಂದ ಮಹಿಳೆಯರಿಗೆ ನಡೆದ ಶಿಬಿರದಲ್ಲಿ ಪ್ರಮಾಣಪತ್ರ ವಿತರಿಸಿ ಬೆಂಗಳೂರು ಕ್ಷೇಮವನದ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿದರು. ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯೊಂದಿಗೆ ಉದ್ಯೋಗಕ್ಕೂ ಅವಕಾಶ ನೀಡಬೇಕು. ಉದ್ಯೋಗದ ಜತೆಗೆ ಕೌಶಲ ಕಲಿಕೆಗೂ ಆದ್ಯತೆ ಇದ್ದರೆ ಪರಿಪೂರ್ಣ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅಗತ್ಯ ಎಂದು ಬೆಂಗಳೂರು ಕ್ಷೇಮವನದ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಆರು ದಿನಗಳ ಮದುಮಗಳ ಶೃಂಗಾರ-ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ಪದವಿ ಶಿಕ್ಷಣದ ಬಳಿಕದ ಗುರಿಯನ್ನು ನಿರ್ಧರಿಸಬೇಕು. ರುಡ್‌ಸೆಟ್ ಸಂಸ್ಥೆಯಲ್ಲಿ ಮಾತ್ರ ಕೌಶಲದ ಜತೆಗೆ ವ್ಯಕ್ತಿತ್ವ ವಿಕಸನವನ್ನು ಕಲಿಸಲಾಗುತ್ತದೆ. ಪ್ರತಿ ಮಹಿಳೆಯಲ್ಲೂ ವಿಭಿನ್ನ ರೀತಿಯ ಕೌಶಲಗಳಿರುತ್ತವೆ. ಅದನ್ನು ಮೊನಚುಗೊಳಿಸಬೇಕು ಅಷ್ಟೆ. ಮಹಿಳೆಯರು ಕೂಡ ಪರಾವಲಂಬಿಯಾಗದೆ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ರುಡ್‌ಸೆಟ್ ಸಂಸ್ಥೆ ಕಲ್ಪಿಸುತ್ತದೆ. ಈ ಮೂಲಕ ದೇಶದ ಆದಾಯದಲ್ಲಿ ಮಹಿಳೆಯರೂ ಪಾಲುದಾರರಾಗಬಹುದು ಎಂದರು.

ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ 35 ಶಿಬಿರಾರ್ಥಿಗಳು ಭಾಗವಹಿಸಿದ್ದು, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net