ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಜ್ಞಾನ ವಿಕಾಸ ಶಿಬಿರ ಶುಭಾರಂಭ

mng--12 may jnana vikasa shibira
Published on

ಮಂಗಳೂರು: ಆನೆಗುಂದಿ ಗುರು ಸೇವಾ ಪರಿಷತ್, ಮಹಾಮಂಡಲ ಮಂಗಳೂರು ಇದರ ಆಶ್ರಯದಲ್ಲಿ ಎಸ್. ಎಸ್. ಎಲ್.ಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಜ್ಞಾನ ವಿಕಾಸ ಶಿಬಿರ ಭಾನುವಾರ ಆರಂಭಗೊಂಡಿತು.


ಮಂಗಳೂರಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಎಂಟು ದಿನಗಳ ಕಾಲ ಮುಂದುವರೆಯಲಿರುವ ಈ ಶಿಬಿರವನ್ನು ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಪಾಂಡೇಶ್ವರ ಶಿಬಿರಕ್ಕೆ ಚಾಲನೆ ನೀಡಿದರು.


ಈ ಸಂದರ್ಭ ಕ್ಷೇತ್ರದ ಮಾಜಿ ಆಡಳಿತ ಮಂಡಳಿ ಸದಸ್ಯ ಕೆ.ಕೆ.ವಿಠಲ ಆಚಾರ್ಯ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಉಪಾಧ್ಯಕ್ಷ ಸೂರಜ್ ಎಂ. ಕದ್ರಿ, ಗುರು ಸೇವಾ ಪರಿಷತ್ ನ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಮಂಗಳೂರು ಘಟಕಾಧ್ಯಕ್ಷ ಶೇಖರ ಆಚಾರ್ಯ ಮಂಗಳಾದೇವಿ ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ ಪ್ರಸ್ತಾವನೆಗೈದು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net