ಬಿಬಿಎಂಪಿ ಕರೊನಾ ಟೆಸ್ಟ್​ ಪ್ರಕರಣ: ವ್ಯಾಕ್ಸಿನ್​ ಎಂದುಕೊಂಡು ಟೆಸ್ಟ್​ಗೆ ಬಂದು ಆಮೇಲೆ ನಕಾರ ತೆಗೆದ ವ್ಯಕ್ತಿ

bbmp
Published on

ಬೆಂಗಳೂರು: ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವ್ಯಕ್ತಿಯೊಬ್ಬ ನಕಾರ ತೆಗೆದು, ಬಿಬಿಎಂಪಿ ಅಧಿಕಾರಿಗಳೇ ಬಲವಂತವಾಗಿ ಪರೀಕ್ಷೆಗೆ ಎಳೆದಿದ್ದ ವಿಚಾರದಲ್ಲಿ ಇದೀಗ ಮತ್ತೊಂದು ತಿರುವು ಸಿಕ್ಕಿದೆ.


ಬಿಬಿಎಂಪಿಯು ನಾಗರತ್‌ಪೇಟೆ ಮುಖ್ಯ ರಸ್ತೆಯಲ್ಲಿ ಉಚಿತವಾಗಿ ಪ್ರತಿನಿತ್ಯ ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಸೋಮವಾರದಂದು ಕಿಶನ್ ಹೆಸರಿನ ವ್ಯಕ್ತಿಯು ಅದನ್ನು ವ್ಯಾಕ್ಸಿನೇಷನ್ ಎಂದು ತಪ್ಪಾಗಿ ಭಾವಿಸಿ ಸ್ವತಃ ನೋಂದಾಯಿಸಿಕೊಂಡಿದ್ದಾನೆ. ಆತನ ನಂಬರ್​ಗೆ ಒಟಿಪಿ ಬಂದಿದೆ. ಅದಾದ ಮೇಲೆ ಆತನಿಗೆ ಇದು ವ್ಯಾಕ್ಸಿನೇಷನ್​ ಅಲ್ಲ, ಕೋವಿಡ್​ ಟೆಸ್ಟ್​ ಎನ್ನುವುದು ಗೊತ್ತಾಗಿದೆ. ಹಾಗಾಗಿ ಕೋವಿಡ್​ ಪರೀಕ್ಷೆಗೆ ಒಳಗಾಗಲು ನಕಾರ ತೆಗೆದಿದ್ದಾನೆ.


ಈ ವೇಳೆ ಅಲ್ಲೇ ಇದ್ದ ಬಿಬಿಎಂಪಿ ಅಧಿಕಾರಿ ನಾಗಭೂಷಣ್​, ಕಿಶನ್​ ಮೇಲೆ ಹಲ್ಲೆ ಮಾಡಿದ್ದಾರೆ. ಆತನಿಗೆ ಹೊಡೆದು ಎಳೆತಂದು ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ತಿಳಿಸಿದ್ದಾರೆ. ಸದ್ಯ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಸುಮೊಟೋ ಕೇಸ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್​ 341, 323, 504ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net