More

    ಅಡ್ಡಾದಿಡ್ಡಿ ಓಡಾಡಿದವರನ್ನ ಎಳೆದೊಯ್ದು ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದ ಬಿಬಿಎಂಪಿ ಅಧಿಕಾರಿಗಳು! ಇದೆಂಥಾ ನ್ಯಾಯವೆಂದು ನೆಟ್ಟಿಗರ ಪ್ರಶ್ನೆ

    ಬೆಂಗಳೂರು: ಕರೊನಾ ಸೋಂಕು ನಿಧಾನವಾಗಿ ತಗ್ಗುತ್ತಿದೆ. ಆದರೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅತ್ಯವಶ್ಯಕ ಎಂದು ವೈದ್ಯರು ಮತ್ತು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅದನ್ನು ಕೇಳರೆ, ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿ, ಅಡ್ಡಾದಿಡ್ಡಿ ಓಡಾಡಿದವರಿಗೆ ಬಿಬಿಎಂಪಿ ಶಾಕ್​ ನೀಡಿದೆ. ಕಾರಣವಿಲ್ಲದೆ ರಸ್ತೆಗಳಿದವರಿಗೆ ಕರೊನಾ ಟೆಸ್ಟ್​ ಮಾಡಲು ಪ್ರಯತ್ನಿಸಿದೆ.

    ಬಿಬಿಎಂಪಿ ವತಿಯಿಂದ ಪ್ರತಿ ಏರಿಯಾದಲ್ಲೂ ಟೆಂಟ್​ ಹಾಕಿಕೊಂಡು ಕರೊನಾ ಟೆಸ್ಟ್​ ಮಾಡುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಧರ್ನರಾಯನ ಸ್ವಾಮಿ ದೇವಸ್ಥಾನದ ಬಳಿ ಅನವಶ್ಯಕವಾಗಿ ರಸ್ತೆಗಿಳಿಸಿದ್ದ ಯುವಕರಿಗೆ ಅಲ್ಲಿನ ಬಿಬಿಎಂಪಿ ಕರೊನಾ ಟೆಸ್ಟ್​ ಸಿಬ್ಬಂದಿ ಕರೊನಾ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಸಾಕಷ್ಟು ಸಮಯ ಈ ಯುವಕರು ಮತ್ತು ಸಿಬ್ಬಂದಿಯ ನಡುವೆ ವಾಗ್ವಾದ ನಡೆದಿದೆ. ಸಿಬ್ಬಂದಿ ಟೆಸ್ಟ್​ ಮಾಡಲು ಮುಂದಾದರೆ ಯುವಕರು ಅದರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಕೊನೆಯಲ್ಲಿ ಸಿಟ್ಟಿಗೆದ್ದ ಸಿಬ್ಬಂದಿ ಯುವಕರಿಗೆ ಥಳಿಸಿ ಟೆಸ್ಟ್​ ಮಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

    ಯುವಕರದ್ದು ತಪ್ಪೇ ಇದ್ದರೂ ಈ ರೀತಿ ಹಲ್ಲೆ ಮಾಡಿ, ಬಲವಂತವಾಗಿ ಕರೊನಾ ಪರೀಕ್ಷೆ ಮಾಡಿಸಲು ಮುಂದಾಗಿದ್ದು ತಪ್ಪು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಟೆಸ್ಟ್​ ಮಾಡಿಸಲು ಒಪ್ಪದ ಸಾರ್ವಜನಿಕರ ಮೇಲೆ ದೂರು ನೀಡಲು ಬಿಬಿಎಂಪಿ ನಿರ್ಧರಿಸಿದೆ. ಸದ್ಯ ಈ ವಿಚಾರ ಭಾರೀ ಚರ್ಚೆಯಲ್ಲಿದೆ.

    ನಾಟಿ ಕೋಳಿ ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗತ್ತಂತೆ! ನಾಟಿ ಕೋಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts