

ಬಂಟ್ವಾಳ: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ತಾಲೂಕಿನ ವಕೀಲರ ಸಂಘಗಳ ಒಗ್ಗೂಡುವಿಕೆಯಲ್ಲಿ ವಕೀಲರ ದ.ಕ ಜಿಲ್ಲಾ ಬಾರ್ ಅಸೋಸೊಯೇಷನ್ ಸಂಸ್ಥೆ ಗುರುವಾರ ಬಂಟ್ವಾಳದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಗುರುವಾರ ಬಿ.ಸಿ.ರೋಡಿನಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾವೇಂದ್ರ ಎಚ್.ವಿ.ಅಧ್ಯಕ್ಷತೆಯಲ್ಲಿ ನಡೆದ ಆರು ತಾಲೂಕಿನ ವಕೀಲರ ಸಂಘ ಪದಾಧಿಕಾರಿಗಳ ಸಮಾಲೋಚನೆ ಸಭೆ ಬಳಿಕ ದ.ಕ ಜಿಲ್ಲಾ ಬಾರ್ ಅಸೋಸಿಯೇಷನ್‌ನನ್ನು ಅಧಿಕೃತವಾಗಿ ೋಷಿಸಲಾಗಿದೆ.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಎಂ.ಕೋಸ್ತ ಅವರು ದ.ಕ.ಜಿಲ್ಲಾ ಬಾರ್ ಅಸೋಸಿಯೇಷನ್‌ನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಮೂಡುಬಿದಿರೆ, ನವೀನ್ ಬಿ.ಕೆ. ಜತೆಕಾರ್ಯದರ್ಶಿ, ಎಚ್ .ವಿ. ರಾವೇಂದ್ರ ಮಂಗಳೂರು, ಸುಕುಮಾರ್ ಕೊಡ್ತುಗುಳಿ ಸುಳ್ಯ, ವಸಂತ ಮರಕಡ ಬೆಳ್ತಂಗಡಿ, ಜಗನ್ನಾಥ ರೈ ಪುತ್ತೂರು, ಹರೀಶ್ ಪಿ. ಮೂಡುಬಿದಿರೆ ಉಪಾಧ್ಯಕ್ಷರು. ಜೆಸಿಂತಾ ಕ್ರಾಸ್ತಾ ಬಂಟ್ವಾಳ ಕೋಶಾಧಿಕಾರಿಯಾಗಿದ್ದು, ಜಿಲ್ಲೆಯ ವಿವಿಧ ತಾಲೂಕಿನ ವಕೀಲರ ಸಂಘಗಳ ಪದಾಧಿಕಾರಿಗಳನ್ನು ಒಳಗೊಂಡಂತೆ 21 ಮಂದಿಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಒಟ್ಟು 30 ಮಂದಿಯ ತಂಡ ರಚಿಸಲಾಗಿದೆ ಎಂದು ರಾವೇಂದ್ರ ಎಚ್.ವಿ. ತಿಳಿಸಿದ್ದಾರೆ.