ಗುರುವಾಯನಕೆರೆಯಲ್ಲಿ ಶಿಕ್ಷಕರಿಗೆ ಸನ್ಮಾನ

New Project (8)
Published on

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಗುರುವಾಯನಕೆರೆಯಲ್ಲಿ ನಡೆಯಿತು.

ಪದ್ಮಾವತಿ ಕುಶಾಲಪ್ಪ ರೈ ಪದ್ಮುಂಜ, ನಂದಿನಿ ವಸಂತ್ ಶರ್ಮ ಉಜಿರೆ ಅವರನ್ನು ಸನ್ಮಾನಿಸಲಾಯಿತು. ವಲಯದ ಮಾಜಿ ಅಧ್ಯಕ್ಷ ಸುರೇಶ್ ಬಿ.ಕೌಡಂಗೆ, ಪ್ರಧಾನ ಕಾರ್ಯದರ್ಶಿ ವಿಜಯ ಎಚ್.ಭಟ್ ಸನ್ಮಾನ ಪತ್ರ ವಾಚಿಸಿದರು. ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ.ಸುವರ್ಣ ಪ್ರಾಸ್ತಾವಿಕ ಮಾತನಾಡಿದರು.

ವಲಯ ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ, ಕಾರ್ಯದರ್ಶಿ ವಿಜಯ ಎಚ್.ಭಟ್, ಗೌರವಾಧ್ಯಕ್ಷ ಜಗದೀಶ್ ಜೈನ್ ಧರ್ಮಸ್ಥಳ, ನಿಯೋಜಿತ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಾಜ್ ಉಜಿರೆ ಉಪಸ್ಥಿತರಿದ್ದರು. ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ದಾಮೋದರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net