

ಸುಬ್ರಹ್ಮಣ್ಯ: ಗುರುವಿಲ್ಲದ ಗುರಿಯನ್ನು ಊಹಿಸುವುದು ಕಷ್ಟ ಸಾಧ್ಯ. ದುರಭ್ಯಾಸ ಕೆಟ್ಟ ಯೋಚನೆಯಂತಹ ಅಂಧಕಾರ ದೂರಗೊಳಿಸಿ ಜ್ಞಾನ ಸದ್ಬುದ್ಧಿಗಳಂತಹ ಪ್ರಕಾಶ ನೀಡುವಂತಹ ಸಾಮರ್ಥ್ಯ ಉಳ್ಳವರು ಗುರು. ಹಿರಿಯರ ಹಾಗೂ ಭಗವಂತನ ಅನುಗ್ರಹವಿಲ್ಲದಿದ್ದವರ ಬಾಳು ವ್ಯರ್ಥ. ಸುಖಮಯ ಬದುಕಿಗೆ ಗುರುಹಿರಿಯರ ಅನುಗ್ರಹ ಮುಖ್ಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪಿಎಚ್.ಡಿ ಪದವಿ ಪಡೆದ ಕಾಲೇಜಿನ ಉಪನ್ಯಾಸಕ ಡಾ.ಮನೋಜ್ ಕುಮಾರ್ ಬಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘ ಸಂಚಾಲಕ ಜಯಪ್ರಕಾಶ್ ಆರ್., ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ ಮೊದಲಾದವರಿದ್ದರು.