ನಾಳೆ ಬಂಟ್ವಾಳ ಮಡಿವಾಳ ಸಂಘ ಕೆಸರ್‌ಡೊಂಜಿ ದಿನ: ಪುಷ್ಪರಾಜ್ ಕುಕ್ಕಾಜೆ ಮಾಹಿತಿ

kesar
ಸಾಂಧರ್ಬಿಕ ಚಿತ್ರ
Published on

ಬಂಟ್ವಾಳ: ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಕಂದೂರು ಹಾಗೂ ಬಂಟ್ವಾಳ ಮಡಿವಾಳ ಯುವ ಬಳಗ ಮತ್ತು ಬಂಟ್ವಾಳ ಮಹಿಳಾ ಘಟಕ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಸಹಕಾರದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರಿಗೆ ಆ.11ರಂದು ಬೆಳಗ್ಗೆ 8ಗಂಟೆಯಿಂದ, ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ಬಳಿಯ ಕೆಸರು ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ ಎಂದು ಉಪಾಧ್ಯಕ್ಷ ಪುಷ್ಪರಾಜ್ ಕುಕ್ಕಾಜೆ ಹೇಳಿದರು.

ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಸೇನಾಧಿಕಾರಿ ಉಮೇಶ್ ಸಾಲಿಯಾನ್ ಹಿರಿಯಡ್ಕ, ನಟ ಸನಿಲ್‌ಗುರು ಬಂಟ್ವಾಳ, ಕ್ರೀಡಾಪಟು ಸಂಕೇತ್ ಎಸ್.ಹೊಸಬೆಟ್ಟು ಅವರಿಗೆ ಸನ್ಮಾನ ನಡೆಯಲಿದೆ. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ.ಎನ್.ಪ್ರಕಾಶ್ ವಹಿಸಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಹರೀಶ್ ಮಂಕುಡೆ, ಗೌರವಾಧ್ಯಕ್ಷ ಎನ್.ಕೆ.ಶಿವ ನಂದಾವರ, ಮಡಿವಾಳ ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಂಜಿಕಲ್ಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net