ಕಾಸರಗೋಡು : ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಡಿಸೆಂಬರ್ 16ರಿಂದ 19ರವರೆಗೆ ಜರುಗುವ ಕೋಟಿ ಪಂಚಾಕ್ಷರಿ ಜಪ ಯಜ್ಞ ಹಾಗೂ ಶ್ರೀಚಕ್ರಪೂಜೆ ಸಿದ್ಧತೆಗಾಗಿ ನಡೆದ ವಿಶೇಷ ಸಭೆಯಲ್ಲಿ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸಮಿತಿ ಕಾರ್ಯಧ್ಯಕ್ಷ ರಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಡಾ.ಅನಂತ ಕಾಮತ್, ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಟ್ರಸ್ಟಿ ಬೋರ್ಡ್ ಅಧ್ಯಕ್ಷ ವಕೀಲ ಗೋವಿಂದ ನಾಯರ್, ಸಿ.ವಿ.ಪೊದುವಾಳ್, ಪಿ.ರಮೇಶ್ ಉಪಸ್ಥಿತರಿದ್ದರು. ಮಹಿಳಾ ಸಮಿತಿ ರಚಿಸಲಾಯಿತು. ಶಾರದಾ ರಾವ್ ಅಧ್ಯಕ್ಷೆಯಾಗಿ, ಶೈಲಜಾ ಕಡಪ್ಪುರ ಕಾರ್ಯದರ್ಶಿಯಾಗಿ, ಕಿಶೋರ್ ಎಸ್.ವಿ.ಟಿ.ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಶ್ರೀ ಕ್ಷೇತ್ರ ಸಮಿತಿ ಅಧ್ಯಕ್ಷ ವಕೀಲ ಗೋವಿಂದ ನಾಯರ್ ಕೋಟಿ ಜಪ ಯಜ್ಞ ಸಮಿತಿ ಅಧ್ಯಕ್ಷ ಡಾ.ಅನಂತ ಕಾಂತ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಕೆ.ಎನ್.ರಾಮಕೃಷ್ಣ ಹೊಳ್ಳ, ಸಾಯಿನಾಥ್ ರಾವ್, ರವಿ ಕೇಸರಿ, ಉಷಾ ಅರ್ಜುನ್, ಮನೋಜ್, ಶ್ರೀದೇವಿ, ಸವಿತಾ, ಶ್ರೀವಳ್ಳಿ, ಅರುಣಾ, ಪುರಂದರ ಶೆಟ್ಟಿ, ಪ್ರೇಮಾ, ಮೀರಾ ಕಾಮತ್, ಸೌಮ್ಯಾ ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಎಸ್.ವಿ.ಟಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ವಂದಿಸಿದರು.