

ಬಾಗಲಕೋಟೆ: ರಾಜ್ಯಾದ್ಯಂತ ಲೋಕಲ್ ಫೈಟ್ ರಂಗೇರಿದೆ. ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೂ ತಾರಾ ಮೆರುಗು ಸಿಕ್ಕಿದ್ದು, ಪುಟ್ಟಗೌರಿ ಮತ್ತು ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರುತೆರೆ ನಟಿ ರಂಜನಿ ರಾಘವನ್ ಎಂಟ್ರಿ ಕೊಟ್ಟಿದ್ದಾರೆ.
ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 3ರಲ್ಲಿ ಮೂವರು ಅಭ್ಯರ್ಥಿಗಳ ಪರ ಬಿಸಿಲನ್ನೂ ಲೆಕ್ಕಿಸದೆ ನಟಿ ರಂಜಿನಿ ಶನಿವಾರ ಬೀದಿಬೀದಿ ಸುತ್ತಿ ಮತಯಾಚನೆ ಮಾಡಿದರು. ಇದನ್ನೂ ಓದಿರಿ ಗ್ರಾ.ಪಂ ಚುನಾವಣಾ ಅಖಾಡಕ್ಕೆ ನಟಿ ರಂಜಿನಿ ರಾಘವನ್ ಎಂಟ್ರಿ: ಭರ್ಜರಿ ಪ್ರಚಾರಕ್ಕೆ ಸಿದ್ಧತೆ!
ಅಲ್ಲದೆ ತಮ್ಮನ್ನು ನೋಡಲು ಕಿಕ್ಕಿರಿದು ಸೇರಿದ್ದ ಸಾವಿರಾರು ಜನರತ್ತ ಕೈಬೀಸಿದ ನಟಿ, ಮಾಸ್ಕ್ ಹಾಕದೆ ಹೀಗೆಲ್ಲ ಓಡಾಡಬಾರದು ಎಂದು ಸಲಹೆ ಕೊಟ್ಟರು.
ಗ್ರಾಮದಲ್ಲಿ ಪುಟ್ಟಗೌರಿ ಬಂದಿದ್ದಾಳೆ ಅಂತ ಸಾವಿರಾರು ಜನರು ಸೇರಿದ್ದರು. ಎಂಎಲ್ಎ, ಎಂಪಿ ಚುನಾವಣಾ ಅಬ್ಬರಕ್ಕೂ ಕಡಿಮೆ ಏನಿಲ್ಲ ಎಂಬಂತೆ ಗ್ರಾಮಸಲ್ಲಿ ಭಾಸವಾಗಿತ್ತು.