

ಬೆಂಗಳೂರು: ಖಾಲಿ ಡಬ್ಬಾ ಸೌಂಡ್ ಜಾಸ್ತಿ ಮಾಡುತ್ತದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಅಷ್ಟೇ. ಅವರ ಬಳಿ ಯಾವುದೇ ದಾಖಲೆಗಳು, ನಿಖರ ಮಾಹಿತಿಯಿಲ್ಲ.ಇದರಿಂದಾಗಿ ಧ್ವನಿ ಏರಿಸಿ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಲೆಳೆದರು.
ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಅವರ ಬಹಿರಂಗ ಚರ್ಚೆ ಪಂಥಾಹ್ವಾನ ಸ್ವೀಕರಿಸುವೆ. ಅವರೇ ದಿನಾಂಕ ಹಾಗೂ ಸ್ಥಳ ಗೊತ್ತುಪಡಿಸಲಿ. ಜೈಲಿಂದ ಶುರುವಾಗಿ ಯಾರರು ಯಾರು ಎಲ್ಲೆಲ್ಲಿ ಅಡ್ಡಾಡುತ್ತಿದ್ದಾರೆ ಎಂದು ಬಿಚ್ಚಿಡುತ್ತೇವೆ. ಸದನದಲ್ಲಿ ಚರ್ಚೆಗೂ ಸಿದ್ಧವೆಂದು ಸಡ್ಡು ಹೊಡೆದರು.
ಸ್ಟ್ರಾಂಗ್ ಆಗ್ಬೇಕು
ಬಿಜೆಪಿಯವರು ಇನ್ನಷ್ಟು ಸ್ಟ್ರಾಂಗ್, ಅಗ್ರೆಸ್ಸಿವ್ ಆಗಲೇಬೇಕು. ಅದು ಮಾಧುಸ್ವಾಮಿ, ನಾನು ಸೇರಿ ಎಲ್ಲರಿಗೂ ಅನ್ವಯಿಸುತ್ತದೆ. ಜತೆಗೆ ಪಕ್ಷದೊಳಗೆ ಒಗ್ಗಟ್ಟು ಕಾಯ್ದುಕೊಳ್ಳದಿದ್ದರೆ ಪಕ್ಷ, ವೈಯಕ್ತಿಕವಾಗಿಯೂ ಹಾನಿ. ಬೇರೆಯವರಿಗೆ ಲಾಭವಾಗುತ್ತದೆ ಎಂದು ಸಿ.ಟಿ.ರವಿ ಕಿವಿಮಾತು ಹೇಳಿದರು.