

ಬದಿಯಡ್ಕ: ದುಶ್ಚಟಗಳಿಗೆ ದಾಸನಾಗದೆ ಇತರರಿಗೆ ತಿಳಿವಳಿಕೆ ನೀಡಬೇಕು. ಅಧಿಕಾರಿಗಳು ಮಾದಕದ್ರವ್ಯ ಸಾಗಾಟಗಾರರನ್ನು ಮಟ್ಟ ಹಾಕಲು ಸಹಕರಿಸಬೇಕಾಗಿದೆ. ಇದರಿಂದ ಸ್ವಸ್ಥ ಸಮಾಜ ಕಾಣಲು ಸಾಧ್ಯ ಎಂದು ಯೋಗ ಶಿಕ್ಷಕ ವಿನಯಪಾಲ್ ಹೇಳಿದರು.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಂದು ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.
ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ದುಶ್ಚಟ ಬೇಗನೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಮಾದಕ ದ್ರವ್ಯ ಬಳಸುವುದು, ಅದನ್ನು ವಿತರಿಸಿ ಇತರರ ಜೀವನ ಹಾಳುಗೆಡಹುವ ಕಾರ್ಯದ ವಿರುದ್ಧ ಧ್ವನಿಯೆತ್ತಬೇಕಾಗಿದೆ ಎಂದರು.
ಅಧ್ಯಾಪಕ ಗಣೇಶ್ ಮಾದಕ ದ್ರವ್ಯಗಳ ಬಳಕೆ ವಿರುದ್ಧ ಪ್ರತಿಜ್ಞೆ ಬೋಧಿಸಿದರು. ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ರ‌್ಯಾಲಿ ಹಮ್ಮಿಕೊಳ್ಳಲಾಯಿತು. ವಿವಿಧ ನಾಮಫಲಕಗಳೊಂದಿಗೆ ವಿದ್ಯಾರ್ಥಿಗಳು, ಸ್ಕೌಟ್ಸ್, ಅಧ್ಯಾಪಕರು ಮೆರವಣಿಗೆ ನಡೆಸಿದರು.