

ಮಂಗಳೂರು: ಪ್ರಸಿದ್ಧ ಆಭರಣ ಬ್ರಾಂಡ್ ಟಿಡಿಎಫ್ 26ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಫಳ್ನೀರ್ನಲ್ಲಿರುವ ಟಿಡಿಎಫ್ ಮಳಿಗೆಯಲ್ಲಿ ಆರಂಭ್ ಕಲೆಕ್ಷನ್ಸ್’ ಬಿಡುಗಡೆಗೊಂಡಿದೆ.
ಎರಡೂವರೆ ದಶಕಗಳ ಅವಧಿಯಲ್ಲಿ ಗಳಿಸಿದ ಪರಿಣತಿ ಮತ್ತು ಕೌಶಲದೊಂದಿಗೆ ಟಿಡಿಎಫ್ ಆಭರಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿ ಬೆಳೆದಿದ್ದು, ತನ್ನ ಬ್ರೈಡಲ್ ಕಲೆಕ್ಷನ್ಸ್ಗಳಿಂದಲೇ ಮನೆಮಾತಾಗಿದೆ. ಶುಕ್ರವಾರ ತನ್ನ ಗ್ರಾಹಕರ ಅಮೃತಹಸ್ತದಿಂದ ಆರಂಭ್ ಕಲೆಕ್ಷನ್ಸ್ನ್ನು ಬಿಡುಗಡೆಗೊಳಿಸಿರುವುದು ಟಿಡಿಎಫ್ನ ಗ್ರಾಹಕ ಸ್ನೇಹಿ ಒಡನಾಟಕಕ್ಕೆ ಸಾಕ್ಷಿಯಾಗಿದೆ. ಬಹುವಿಧಗಳ ಬ್ರೈಡಲ್ ಕಲೆಕ್ಷನ್ಸ್, ವಜ್ರಾಭರಣಗಳು, ಪೊಲ್ಕೆ ಡಿಸೈನ್ಗಳು ಟಿಡಿಎಫ್ನ ವಿಶೇಷವಾಗಿದ್ದು, ವಿಶಾಲ ಮತ್ತು ವಿಪುಲ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ವಿನ್ಯಾಸದ ಆಭರಣಗಳು ಲಭ್ಯವಿವೆ.
*26ನೇ ವಾರ್ಷಿಕೋತ್ಸವದ ವಿಶೇಷ ಕೊಡುಗೆ
ಟಿಡಿಎಫ್ ಆಭರಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿ ಬೆಳೆದಿದ್ದು, ಅಮೋಘ ವಿನ್ಯಾಸಗಳು, ಅಗಾಧ ಗುಣಮಟ್ಟ ಮತ್ತು ಗ್ರಾಹಕ ಸೇವೆಗೆ ಅದು ಇನ್ನೊಂದು ಹೆಸರಾಗಿದೆ. ಟಿಡಿಎಫ್ 26ನೇ ವರ್ಷಾಚರಣೆಯ ಸಂದರ್ಭದಲ್ಲಿ ಗ್ರಾಹಕರಿಗೆ ಜುಲೈ.15ರ ತನಕ ಆಕರ್ಷಕ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ವಾರ್ಷಿಕೋತ್ಸವ ಆಫರ್ ಪ್ರತಿಯೊಬ್ಬ ಗ್ರಾಹಕರಿಗೂ ಅವಕಾಶ ಕಲ್ಪಿಸಿ, ಅವರ ಸಂಭ್ರಮದಲ್ಲಿ ಜತೆಯಾಗುವುದು ಸಂಸ್ಥೆಯ ಧ್ಯೇಯ. ಆಯ್ಕೆಯ ವಜ್ರಾಭರಣಗಳ ತಯಾರಿ ವೆಚ್ಚ ಶೇ.100ರಷ್ಟು ಕಡಿತ ಮಾಡಲಿದೆ. ಗ್ರಾಹಕರು ವಜ್ರದ ಮೌಲ್ಯವನ್ನು ಮಾತ್ರ ಪಾವತಿಸಿದರೆ ಸಾಕು. ಚಿನ್ನದ ಆಭರಣ ಪ್ರಿಯರಿಗೆ ಶೇ.35ರಷ್ಟು ತಯಾರಿ ವೆಚ್ಚ ಕಡಿತ ಮಾಡಲಿದೆ. ಈ ಕೊಡುಗೆ ಗ್ರಾಹಕರಿಗೆ ಕೈಗೆಟಕುವ ಬೆಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಚಿನ್ನ ಹಾಗೂ ವಜ್ರಾಭರಣಗಳನ್ನು ನೀಡಬೇಕೆನ್ನುವ ಟಿಡಿಎಫ್ನ ಬದ್ಧತೆಗೆ ಸಾಕ್ಷಿಯಾಗಿದೆ. ಹಳೇ ಚಿನ್ನವನ್ನು ಹೊಸ ಚಿನ್ನದ ಜತೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಶೀಘ್ರದಲ್ಲೇ ಟಿಡಿಎಫ್ ಉಡುಪಿ ಶಾಖೆ ಶುಭಾರಂಭ
ಟಿಡಿಎಫ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಆಭರಣಗಳನ್ನು ಒದಗಿಸಲು ಮತ್ತು ಸ್ಮರಣೀಯ ಅನುಭವಗಳನ್ನು ನೀಡಲು ನಿರಂತರ ಶ್ರಮಿಸುತ್ತಿದೆ. ಮುಂಬೈಯ ಘಾಟ್ಕೋಪರ್ ಹಾಗೂ ಉಡುಪಿಯಲ್ಲಿ ಟಿಡಿಎಫ್ ಶಾಖೆ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ. ಮಂಗಳೂರಿನಲ್ಲಿ ಟಿಡಿಎಫ್ ಸಂಸ್ಥೆಯು ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆಯ ಬಳಿಯಲ್ಲಿದ್ದು, ಗ್ರಾಹಕರು ಟಿಡಿಎಫ್ ಮಳಿಗೆಗೆ ಭೇಟಿ ನೀಡಿ ತಮ್ಮ ಇಷ್ಟದ ವಿವಿಧ ವಿನ್ಯಾಸದ ವಜ್ರಾಭರಣಗಳನ್ನು ಖರೀದಿಸಬಹುದು.