ಸಂಘ ಚಟುವಟಿಕೆ ವ್ಯಕ್ತಿತ್ವ ವಿಕಸನಕ್ಕೆ ಮೆಟ್ಟಿಲು

gan
Published on

ಕುಂದಾಪುರ: ಸಂ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂವಹನ ಕೌಶಲದೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ಪೂರ್ಣವಾದ ಮೆಟ್ಟಿಲಾಗುತ್ತದೆ. ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು ಹೃದಯವಂತರಾಗಬೇಕು ಎಂದು ಕುಂದಾಪುರ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ ಹೇಳಿದರು.

ಕಂಡ್ಲೂರಿನ ರಾಮ್‌ಸನ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಹಾಗೂ ವಿವಿಧ ಸಂಗಳನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಅಶೋಕ್ ಕುವಾರ್ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾವ್ರಾಟ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಬಿಸಿಯೂಟ ಅಡುಗೆ ಸಿಬ್ಬಂದಿ ಜಾನಕಿ ಕಂಡ್ಲೂರು ಅವರನ್ನು ಗೌರವಿಸಲಾಯಿತು.

ಸಹಶಿಕ್ಷಕಿ ಲಕ್ಷ್ಮೀ ಶೆಟ್ಟಿ ವಿವಿಧ ಸಂಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರಿಚಯ ವಾಡಿಕೊಟ್ಟರು. ಸಹಶಿಕ್ಷಕಿ ಜ್ಯೋತಿ ಶಾಲಾ ಸಂಸತ್‌ನ ನೂತನ ಮಂತ್ರಿ ಮಂಡಲ ಪರಿಚಯಿಸಿದರು. ಶಾಲಾ ನಾಯಕ ಹಸನ್ ಅಲಿ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಕುವಾರ್ ಶೆಟ್ಟಿ, ಸಮಿತಿ ಸದಸ್ಯ ದಿನೇಶ್ ಆಚಾರ್ಯ ಕಂಡ್ಲೂರು, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ರಾವೇಂದ್ರ ಬಿ.ಚಂದನ್, ಉದ್ಯಮಿ ರಾವೇಂದ್ರ ಮರಾಠಿ, ಮುಖ್ಯಶಿಕ್ಷಕ ಗೋಪಾಲ ವಿಷ್ಣು ಭಟ್, ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ಹಳನಾಡು, ಅಜಯ್ ಕುವಾರ್ ಶೆಟ್ಟಿ, ಅಣ್ಣಪ್ಪ ಎಂ.ಗೌಡ, ರತ್ನ, ಅಶ್ವಿನಿ, ಹಳೇ ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಸಹ ಶಿಕ್ಷಕಿ ರಜಿನಿ ಹೆಗಡೆ ಸ್ವಾಗತಿಸಿದರು. ಜ್ಯೋತಿ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net