

ಕೊಕ್ಕರ್ಣೆ: ಕೆಂಜೂರು ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ, ಸಮವಸ್ತ್ರ ವಿತರಣೆ ಮತ್ತು ಅರಿವು ಕಾರ್ಯಕ್ರಮ ನಡೆಯಿತು.
ದಾನಿ ಡಾ.ವಿನಯ್ ಕುವಾರ್ ಶೆಟ್ಟಿ ನೀಡಿದ ಸಮವಸ್ತ್ರವನ್ನು ವಿನೋದ ಬಿ.ಶೆಟ್ಟಿ ವಿತರಿಸಿದರು. ಸಿಎಚ್ಒ ದೀಕ್ಷಿತ ಅವರು ಸ್ತನ್ಯಪಾನ, ಮಹಿಳಾ ಮತ್ತು ಮಕ್ಕಳ ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ಶಾರದಾ ಅರಿವು ಕಾರ್ಯಕ್ರಮದ ಬಗ್ಗೆ ವಾಹಿತಿ ನೀಡಿದರು.
38ನೇ ಕಳ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ ಕುವಾರ್, ಸದಸ್ಯರುಗಳಾದ ಸುಕನ್ಯಾ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ, ವನಿತಾ ಹೆಗ್ಡೆ, ಆಶಾ ಕಾರ್ಯಕರ್ತೆಯರು, ಬಾಲ ವಿಕಾಸ ಅಧ್ಯಕ್ಷೆ ಶೀಲಾ, ಪಾಲಕರು, ಅಂಗನವಾಡಿ ಸಹಾಯಕಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ರಮ್ಯಾ ಆರ್.ವೈಲಾಯ ನಿರೂಪಿಸಿದರು.